ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ‘ಮೀನು ಸಾರು’ ನೀಡಲು ಚಿಂತನೆ?

masthmagaa.com:

ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರದ ಕುರಿತು ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿದೆ. ತೆಲಂಗಾಣ ರಾಜ್ಯ ಸರ್ಕಾರ ತಮ್ಮ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೀನು ಸಾರು ಸೇರಿಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಬಿಸಿಯೂಟದಲ್ಲಿಯೂ ಮೀನಿನ ಸಾರು ಸೇರಿಸಬೇಕು ಅನ್ನೋದ್ರ ಕುರಿತು ಕರಾವಳಿಯಲ್ಲಿ ಚರ್ಚೆಗಳು ಆರಂಭವಾಗಿವೆ. ಅಲ್ದೆ ಬಿಸಿಯೂಟ ಮೆನುವಿನಲ್ಲಿ ಮೀನಿನ ಸಾರು ಸೇರಿಸುವ ಪರವಾಗಿ ತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೀನಿನ ಪ್ರೋಟೀನ್ ಶಾಲಾ ಮಕ್ಕಳಿಗೆ ಪ್ರಯೋಜನ ನೀಡುತ್ತದೆ. ಮಕ್ಕಳು ಸ್ಥಳೀಯವಾಗಿ ಲಭ್ಯವಿರುವ ಆಹಾರವನ್ನು ಸೇವಿಸುವುದು ಉತ್ತಮ ಅಂತ ಹೇಳುತ್ತಿದ್ದಾರೆ. ಜೊತೆಗೆ ಇದ್ರಿಂದ ಸ್ಥಳೀಯ ಮೀನುಗಳ ಬಳಕೆಯನ್ನ ಉತ್ತೇಜಿಸಿದಂತಾಗುತ್ತೆ ಹಾಗೂ ಸ್ಥಳೀಯ ಮೀನುಗಾರರಿಗೆ ಸಹಾಯ ಮಾಡಿದಂತಾಗುತ್ತದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಂದ್ಹಾಗೆ ಈಗಾಗಲೇ ಮೊಟ್ಟೆ ವಿಚಾರಕ್ಕೆ ವಿವಾದ ಉಂಟಾಗಿದ್ದ ಕಾರಣದಿಂದ ರಾಜ್ಯ ಸರ್ಕಾರ ಈ ವಿಚಾರಕ್ಕೆ ಕೈ ಹಾಕೋದು ಡೌಟ್‌ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply