ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದ ಮತ್ತೊಂದು ಅತ್ಯಾಚಾರ ಕೇಸ್!

masthamagaa.com:

ಇನ್ನು ಲೈಂಗಿಕ್ ದೌರ್ಜನ್ಯ ಆರೋಪ ಎದುರಿಸ್ತಿರೊ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದ ಮತ್ತೊಂದು ಕೇಸ್‌ ದಾಖಲಾಗಿದೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹೊಸದಾಗಿ ಪ್ರಜ್ವಲ್‌ ವಿರುದ್ದ ಅತ್ಯಾಚಾರ ಕೇಸ್‌ ದಾಖಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡ ತೋಟದ ಮನೆಯಲ್ಲಿ SIT ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ತೆ ಮೇಲೆ ಗನ್ನಿಕಡದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪ್ರಜ್ವಲ್ ಅತ್ಯಾಚಾರ ಎಸಗಿದ್ದಾರೆ ಅಂತ ಆರೋಪಿಸಲಾಗಿದೆ.‌ ಈ ಮೂಲಕ ಪ್ರಜ್ವಲ್‌ ವಿರುದ್ದ ಮೂರನೇ ಅತ್ಯಾಚಾರ ಕೇಸ್‌ ದಾಖಲಾಗಿದೆ. ಇತ್ತ ಪ್ರಜ್ವಲ್‌ರ ಪೆನ್‌ಡ್ರೈವ್‌ ಕೇಸ್‌ನಲ್ಲಿ ಭವಾನಿ ರೇವಣ್ಣ ಅವ್ರಿಗೆ SIT ಎರಡನೇ ನೋಟಿಸ್‌ ನೀಡಿದೆ. ವಿಚಾರಣೆ ವೇಳೆ ಸಂತ್ರಸ್ಥೆ ಒಬ್ರು ಭವಾನಿ ಅವ್ರ ಹೆಸರು ಉಲ್ಲೇಖಿಸಿದ್ದಕ್ಕಾಗಿ ಈ ನೋಟಿಸ್‌ ನೀಡಲಾಗಿದೆ. ಇನ್ನು ಇದೇ ಕೇಸ್‌ನಲ್ಲಿ ಪ್ರಜ್ವಲ್‌ರ ಮಾಜಿ ಕಾರು ಚಾಲಕ ಕಾರ್ತಿಕ್‌ ಹಾಗೂ ವಕೀಲ ದೇವರಾಜೇಗೌಡ ಅವ್ರಿಗೂ SIT ನೋಟಿಸ್‌ ನೀಡಿದ್ದು, ಒಟ್ಟಾರೆ ಭವಾನಿ ಸೇರಿದಂತೆ ಈ ಮೂವರಿಗೂ 24ಗಂಟೆಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಇನ್ನು ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋಗಳನ್ನ ಲೀಕ್‌ ಮಾಡಿದ ಆರೋಪದ ಮೇಲೆ ಪ್ರಜ್ವಲ್‌ ಅನ್ನೊ ವ್ಯಕ್ತಿ ಮೇಲೆ ಚಿಕ್ಕಮಗಳೂರಿನ ಕುದುರೆಮೂಖ ಪೋಲಿಸ್‌ಠಾಣೆಯಲ್ಲಿ FIR ದಾಖಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿದ ಪೋಲಿಸರು ಮೂಡಿಗೇರಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಅಂದ್ಹಾಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಕ್ಕಾಗಿ ಈ ಪ್ರಜ್ವಲ್‌ ಅವ್ರನ್ನ ಮೇಲೆ FIR ದಾಖಲಾಗಿದೆ. ಇನ್ನೊಂದ್ಕಡೆ ಇಬ್ಬರು ಮಹಿಳಾ ಅಧಿಕಾರಿಗಳು ಕೂಡ ಪ್ರಜ್ವಲ್‌ ತಮ್ಮ ಮೇಲೆ ಲೈಗಿಂಕ ದೌರ್ಜನ್ಯ ನಡೆಸಿರೊದಾಗಿ SIT ಮುಂದೆ ಹೇಳಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ. ಈ ಮೂಲಕ ಪ್ರಜ್ವಲ್‌ ವಿರುದ್ದ ಮತ್ತೊಂದು ಕೇಸ್‌ ದಾಖಲಾಗೊ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಜ್ವಲ್‌ ಕೇಸ್‌ನಲ್ಲಿ ನನ್ನದಾಗಲಿ ಅಥ್ವಾ ಡಿಸಿಎಂ ಡಿಕೆ ಶಿವಕುಮಾರ ಅವ್ರದ್ದಾಗಲಿ ಯಾವುದೇ ಪಾತ್ರ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply