ಇಸ್ರೇಲ್-ಹಮಾಸ್‌ ಸಂಘರ್ಷ: US, ಪಾಕ್‌, ಲಂಡನ್‌, ಪ್ಯಾರಿಸ್‌ ಸೇರಿದಂತೆ ವಿಶ್ವದೆಲ್ಲೆಡೆ ಪ್ರತಿಭಟನೆ

masthmagaa.com:

ಇತ್ತ ಸಂಘರ್ಷ ನಿಲ್ಲಿಸುವಂತೆ ವಿಶ್ವದ ವಿವಿಧಕಡೆ ಭಾರೀ ಪ್ರತಿಭಟನೆಗಳು ನಡೆದಿವೆ. ಇಸ್ರೇಲ್‌, ಅಮೆರಿಕ, ಪಾಕ್‌, ಲಂಡನ್‌, ಪ್ಯಾರಿಸ್‌, ಬರ್ಲಿನ್‌ನಲ್ಲಿ ಕದನವಿರಾಮ ಘೋಷಿಸುವಂತೆ ಆಗ್ರಹಿಸಿ ಪ್ಯಾಲಸ್ಟೀನ್‌ ಪರ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ನಿವಾಸದ ಮುಂದೆ ಸಾವಿರಾರು ಪ್ರತಿಭಟನಾಕಾರರು ಜಮಾಗೊಂಡು, ಅವರ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ಇತ್ತ ಲಂಡನ್‌ನಲ್ಲಿ ಸುಮಾರು 30 ಸಾವಿರ ಪ್ರತಿಭಟನಾಕಾರರು ಸೆಂಟ್ರಲ್‌ ಲಂಡನ್‌ನಲ್ಲಿ ಜಮಾಗೊಂಡು ಪ್ರತಿಭಟಿಸಿದ್ದಾರೆ. ಪ್ಯಾರಿಸ್‌ನಲ್ಲಿ 19 ಸಾವಿರ ಜನ ಬೀದಿಗಳಿದಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರು ʻಫ್ರೀ ಪ್ಯಾಲಸ್ಟೀನ್‌ʼ ಅಂತ ಬರೆದಿರೊ ಬೋರ್ಡ್‌ಗಳನ್ನ ಹಿಡಿದು, ಇಸ್ರೇಲ್‌ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ಇತ್ತ ಬರ್ಲಿನ್‌ನಲ್ಲೂ ಸಾವಿರಾರು ಜನ ತಮ್ಮ ಮಕ್ಕಳು ಹಾಗೂ ಕುಟುಂಬಸಮೇತ ರೋಡಿಗಿಳಿದು ಪ್ರತಿಭಟಿಸಿದ್ದಾರೆ. ಇರಾನ್‌ನಲ್ಲೂ ಪ್ರತಿಭಟನೆಗಳು ಕಂಡುಬಂದಿದ್ದು, ಅಮೆರಿಕ ವಿರುದ್ಧ ಘೋಷಣೆಗಳು ಕೇಳಿಬಂದಿವೆ. ಅಲ್ದೇ ಅಮೆರಿಕದ ರಾಜಧಾನಿ ವಾಷಿಂಗ್‌ಟನ್‌ನಲ್ಲೂ ಸಾವಿರಾರು ಜನರು, ಕದನವಿರಾಮಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ. ಇಸ್ರೇಲ್‌ಗೆ ಅಧ್ಯಕ್ಷ ಜೋ ಬೈಡೆನ್‌ ನೀಡ್ತಿರೊ ಬೆಂಬಲವನ್ನ ಖಂಡಿಸಿದ್ದಾರೆ. ಈ ವೇಳೆ ಬೈಡನ್‌ ನೀವು ಬಚ್ಚಿಟ್ಟುಕೊಳ್ಳೋಕೆ ಆಗಲ್ಲ. ನಾವು ನಿಮ್ಮ ಮೇಲೆ ನರಮೇಧದ ಆರೋಪ ಹೊರಸ್ತೀವಿ ಅಂತ ಕೂಗಿದ್ದಾರೆ. ಇತ್ತ ಪಕ್ಕದ ಪಾಕಿಸ್ತಾನ ಹಾಗೂ ಸೆನೆಗಲ್‌ನಲ್ಲೂ ಪ್ಯಾಲಸ್ಟೀನ್‌ನ್ನ ಬೆಂಬಲಿಸಿ ಪ್ರತಿಭಟನೆಗಳು ನಡೆದಿವೆ.

-masthmagaa.com

Contact Us for Advertisement

Leave a Reply