ನೂರನೇ ದಿನಕ್ಕೆ ಕಾಲಿಟ್ಟ ಇಸ್ರೇಲ್‌ ಹಮಾಸ್‌ ಯುದ್ಧ!

masthmagaa.com:

ಇಸ್ರೇಲ್‌ ಹಮಾಸ್‌ ಯುದ್ಧ ಭಾನುವಾರ ನೂರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ವಿಶ್ವಾದ್ಯಂತ ಯುದ್ಧ ನಿಲ್ಲಿಸೋಕೆ ಭಾರಿ ಪ್ರತಿಭಟನೆಗಳು ನಡೆದಿವೆ. ಅಲ್ಲದೆ ಯುದ್ಧದ ಕಾವು ಅಮೆರಿಕ, ಯುಕೆಗಳಿಗೆ ತಟ್ಟೋಕೆ ಶುರುವಾಗಿ, ಅಲ್ಲಿನ ಪ್ರಮುಖ ನಗರಗಳಲ್ಲೂ ಯುದ್ಧದ ವಿರುದ್ಧ ಭಾರಿ ರ್ಯಾಲಿಗಳು ನಡೆದಿವೆ. ಕೆಲವು ದಿನಗಳ ಹಿಂದೆ ಯೆಮನ್‌ ಹೌತಿಗಳ ಮೇಲೆ ಅಮೆರಿಕ, ಯುಕೆ ಸೇರ್ಕೊಂಡು ಏರ್‌ಸ್ಟ್ರೈಕ್‌ ನಡೆಸಿದ್ವು. ಕೆಂಪು ಸಮುದ್ರದಲ್ಲಿ ಪರಿಸ್ಥಿತಿ ಹದಗೆಟ್ಟು, ಹೌತಿಗಳ ಕಾಟಕ್ಕೆ ಬೇಸತ್ತು, ಅಮೆರಿಕ ಯುಕೆಗಳು ಕ್ರಮ ತಗೊಳ್ಳೋ ಪರಿಸ್ಥಿತಿ ಬಂದಿದೆ. ಅದ್ರ ಜೊತೆ ಯುದ್ಧ ನೂನೇ ದಿನಕ್ಕೆ ಕಾಲಿಟ್ಟಿರೋ ಹಿನ್ನೆಲೆಯಲ್ಲಿ ಎರಡೂ ದೇಶಗಳ ರಾಜಧಾನಿಗಳಲ್ಲಿ ಭಾರಿ ಪ್ರತಿಭಟನೆಗಳು ಶುರುವಾಗಿವೆ. ಲಂಡನ್‌, ವಾಷಿಂಗ್‌ಟನ್‌ಗಳಲ್ಲಿ ಲಕ್ಷಾಂತರ ಜನ್ರು ಪ್ಯಾಲಸ್ತೀನ್‌ ಪರವಾಗಿ ರೋಡಿಗಿಳಿದು ಯುದ್ಧದಲ್ಲಿ ಸೀಜ್‌ ಫೈರ್‌ ತರ್ಬೇಕು ಅಂತ ಆಗ್ರಹಿಸಿದ್ದಾರೆ. ವಾಷಿಂಗ್‌ಟನ್‌ನಲ್ಲಂತು ವೈಟ್‌ಹೌಸ್‌ನ ಸೆಕ್ಯುರಿಟಿ ಫೆನ್ಸಿಂಗನ್ನೇ ಪ್ರತಿಭಟನಾಕಾರರು ಕಿತ್ತಾಕಿದ್ದಾರೆ. ಅತ್ತ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೇತನ್ಯಾಹು, ಗಾಜಾದಲ್ಲಿ ನಮ್ಮನ್ನ ಯಾರೂ ತಡೆಯೋಕಾಗಲ್ಲ. ಅದು ಅಂತರಾಷ್ಟ್ರೀಯ ಕೋರ್ಟ್‌ ಆದ್ರೂ ಸರಿ, ಇನ್ಯಾರೋ ಆದೂ ಸರಿ. ಯಾರಿಗೂ ನಾವು ಬಗ್ಗಲ್ಲ ಅಂದಿದ್ದಾರೆ. ಇಸ್ರೇಲ್‌ ಆರ್ಮಿ ಚೀಫ್‌ ನಾವು ಸುರಕ್ಷಿತವಾಗಿ ಬದುಕೋ ಹಕ್ಕಿಗಾಗಿ ಯುದ್ಧ ಮಾಡ್ತಿದ್ದೀವಿ ಅಂದಿದ್ದಾರೆ. ಇನ್ನು ಇಸ್ರೇಲ್‌ ಹಮಾಸ್‌ ಯುದ್ಧದಲ್ಲಿ ಇದುವರೆಗೆ 24 ಸಾವಿರ ಪ್ಯಾಲಸ್ತೀನಿಯರು ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply