ಇಸ್ರೇಲ್‌ನಲ್ಲಿ ನೂತನ ಸರ್ಕಾರದ ವಿರುದ್ದ ಭುಗಿಲೆದ್ದ ಪ್ರತಿಭಟನೆಗಳು!

masthmagaa.com:

ಇಸ್ರೇಲ್‌ನಲ್ಲಿ ಹೊಸದಾಗಿ ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದಿರೊ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸರ್ಕಾರದ ವಿರುದ್ದ ಪ್ರತಿಭಟನೆಗಳು ಶುರುವಾಗಿವೆ. ಪ್ರತಿಭಟನಾಕಾರರು ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬಲಪಂಥೀಯ ಹಾಗೂ ವರ್ಣಭೇದದ ವಿರುದ್ದ ನಾವೆಲ್ಲ ಒಟ್ಟಾಗಿದ್ದೇವೆ ಅಂತ ಬರೆದಿರೊ ಘೋಷಣಾ ಫಲಕಗಳನ್ನ ಹಿಡಿದು ಬೀದಿಗಳಲ್ಲಿ ಪ್ರೊಟೆಸ್ಟ್‌ ನಡೆಸಿದ್ದಾರೆ. ಕೆಲವರು ಇಸ್ರೇಲ್‌ ಹಾಗೂ ರೇನ್‌ಬೌ ಫ್ಲ್ಯಾಗ್‌ಳನ್ನ ಹಿಡಿದಿದ್ರೆ, ಇನ್ನು ಕೆಲವರು ಕ್ರೈಂ ಮಿನಿಸ್ಟರ್‌ ಅನ್ನೊ ಬ್ಯಾನರ್‌ಗಳನ್ನ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply