ರಷ್ಯಾ- ಯುಕ್ರೇನ್‌ ಯುದ್ಧ ಮತ್ತಷ್ಟು ತೀವ್ರ!

masthmagaa.com:

ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ರಷ್ಯಾ ಮೇಲೆ ಯುಕ್ರೇನ್ ಡ್ರೋನ್‌ ದಾಳಿ ನಡೆಸಿದೆ. ಯುಕ್ರೇನ್‌ನ ಮೂರು ಡ್ರೋನ್‌ಗಳನ್ನ ನಾವು ಹೊಡೆದು ಉರುಳಿಸಿದ್ದೀವಿ ಅಂತ ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ. ಒಂದು ಡ್ರೋನ್‌ ಅನ್ನ ಮಾಸ್ಕೋ ನಗರದ ಹೊರವಲಯದಲ್ಲೂ , ಇನ್ನುಳಿದ ಎರಡು ಡ್ರೋನ್‌ಗಳನ್ನ ಯುಕ್ರೇನ್‌ ಗಡಿ ಭಾಗದಲ್ಲಿ ಹೊಡೆದು ಹಾಕಲಾಯಿತು, ಸಧ್ಯ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಅಂತ ರಷ್ಯಾ ಹೇಳಿದೆ. ಜೊತೆಗೆ ರಷ್ಯಾ ಮೇಲೆ ಯುಕ್ರೇನ್‌ ಮಾಡಿರೋ ದಾಳಿ ಭಯೋತ್ಪಾದಕ ದಾಳಿ ಅಂತ ನಾವು ಕನ್ಸಿಡರ್‌ ಮಾಡ್ತೀವಿ. ಎರಡು ಕಚೇರಿಗಳಿಗೆ ಈ ದಾಳಿಯಲ್ಲಿ ಹಾನಿಯಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಲ್ದೆ ಮಾಸ್ಕೋದ ನುಕೊವೋ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿದ್ದು, ನಂತರ ಪ್ರಾರಂಭಿಸಲಾಗಿದೆ. ಅಂದ್ಹಾಗೆ ಇತ್ತೀಚೆಗಷ್ಟೆ ಪುಟಿನ್‌ ಅರಮನೆ ಕ್ರೆಮ್ಲಿನ್‌ ಮೇಲೆ ಡ್ರೋನ್‌ ದಾಳಿ ನಡೆಸಲಾಗಿತ್ತು. ಇದೀಗ ಮತ್ತೆ ಯುಕ್ರೇನ್‌ ಡ್ರೋನ್‌ ದಾಳಿ ಮಾಡಿದ್ದು, ಇದಕ್ಕೆಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ನ್ಯಾಟೋ ಕೊಡ್ತಿರೋ ಬೆಂಬಲನೇ ಕಾರಣ ಅಂತ ರಷ್ಯಾ ಆರೋಪಿಸಿದೆ. ಇತ್ತ ಯುಕ್ರೇನ್‌ನ ಝಪೊರಿಝಿಯಾ ನಗರದಲ್ಲಿರುವ ಅಪಾರ್ಟ್‌ಮೆಂಟ್‌ ಒಂದ್ರ ಮೇಲೆ ರಷ್ಯಾ ಮಿಸೈಲ್‌ ದಾಳಿ ಮಾಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ ಯುದ್ಧದ ಬಗ್ಗೆ ಪುಟಿನ್‌ ಮಾತನಾಡಿದ್ದಾರೆ. ಈ ಯುದ್ದ ನಿಲ್ಲಿಸಬೇಕು ಹಾಗೂ ಶಾಂತಿ ಒಪ್ಪಂದ ಆಗ್ಬೇಕು ಅಂದ್ರೆ ಅದಕ್ಕೆ ಎರಡೂ ಕಡೆಯವರು ರೆಡಿ ಇರ್ಬೇಕು. ಆದ್ರೆ ಯುಕ್ರೇನ್‌ ಇದನ್ನ ಅರ್ಥ ಮಾಡಿಕೊಳ್ತಿಲ್ಲ. ಹೀಗಾಗಿ ಇದನ್ನ ನಾವು ಮುಂದುರೆಸ್ತೇವೆ ಅಂತ ಪುಟಿನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply