ಟಿಬೆಟ್‌ ವಲಸಿಗರಿಗೆ ನೇಪಾಳದಲ್ಲೂ ಬದುಕಲು ಬಿಡುತ್ತಿಲ್ಲ ಚೀನಾ!

masthmagaa.com:

ನೇಪಾಳದಲ್ಲಿರೋ ಟಿಬೆಟ್‌ ವಲಸಿಗರು ಚೀನಾ ಮತ್ತು ನೇಪಾಳದ ಮಧ್ಯೆ ಸಿಕ್ಕಿ ಒದ್ದಾಡ್ತಿದಾರೆ. ನೇಪಾಳದಲ್ಲಿ ಹೆಚ್ಚಾಗ್ತಿರೋ ಜನಾಂಗೀಯ ತಾರತಮ್ಯದ ಕಾರಣಕ್ಕೆ ಟಿಬೆಟ್‌ ವಲಸಿಗರು ನೇಪಾಳದಲ್ಲಿ ವಾಸ ಮಾಡೋಕೆ ಹಿಂದೇಟು ಹಾಕ್ತಿದಾರೆ ಅಂತ ವರದಿಯಾಗಿದೆ. ನೇಪಾಳ ಬಿಟ್ಟು ಹೋಗೋಕೆ ಬಿಡದೆ.. ಅಲ್ಲಿಯೇ ಇರೋಕು ಬಿಡದೆ ಚೀನಾ ತಡೆಯುತ್ತಿದೆ. ಇದ್ರಿಂದ ಭಾರತಕ್ಕೆ ಬರ್ಬೇಕು ಅಂತ ಅಂದುಕೊಳ್ತಿರೋ ಟಿಬೆಟ್‌ ವಲಸಿಗರ ಮೇಲೆ ಪರಿಣಾಮ ಬೀಳ್ತಿದೆ ಎನ್ನಲಾಗಿದೆ. ಜೊತೆಗೆ ಸರಿಯಾದ ದಾಖಲೆಗಳು ಇರದ ಕಾರಣಕ್ಕೆ ವಲಸಿಗರಿಗೆ ಕೆಲಸ ಅಥ್ವಾ ಇತರ ಸೌಲಭ್ಯಗಳನ್ನ ನೀಡ್ತಿಲ್ಲ. ಹೀಗಾಗಿ ನೇಪಾಳಕ್ಕೆ ವಲಸೆ ಹೋಗೋರ ಸಂಖ್ಯೆಯಲ್ಲಿ ಇಳಿಕೆಯಾಗ್ತಿದೆ ಅಂತ ಹೇಳಲಾಗ್ತಿದೆ. ಚೀನಾದ ತಾಳಕ್ಕೆ ಕುಣಿಯೋ ನೇಪಾಳ ಟಿಬೆಟ್‌ ವಲಸಿಗರ ಕಾರ್ಯಕ್ರಮಗಳನ್ನ ಬ್ಯಾನ್‌ ಮಾಡೋದು. ಹಾಗೂ ಅವರ ಮೇಲೆ ದಾಳಿ ಮಾಡೋದನ್ನ ಜಾಸ್ತಿ ಮಾಡಿದೆ. ಚೀನಾ ತನಗೆ ಬೇಕಾದ ರೀತಿಯಲ್ಲಿ ಮಾಡೋಕೆ ನೇಪಾಳದ ಅಧಿಕಾರಿಗಳಿಗೆ ಸೂಚನೆ ನೀಡ್ತಿದೆ. ಈ ಕಾರಣಕ್ಕೆ ಟಿಬೆಟ್‌ ವಲಸಿಗರು ನೇಪಾಳದಲ್ಲಿ ಕಡಿಮೆಯಾಗ್ತಿದಾರೆ ಹಾಗೂ ಎರಡೂ ದೇಶಗಳ ಮಧ್ಯದಲ್ಲಿ ಸಿಲುಕಿ ತೊಂದ್ರೆ ಅನುಭವಿಸುತ್ತಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply