ರಾಜಸ್ಥಾನದಿಂದ ತಪ್ಪಿಸಿಕೊಂಡ ಟೈಗರ್! ಅಪಾಯದಲ್ಲಿ ಆಫ್ರಿಕಾದ ಚೀತಾಗಳು?

masthmagaa.com:

ಆಫ್ರಿಕಾದಿಂದ ಭಾರತಕ್ಕೆ ತರಲಾದ ಚೀತಾಗಳಿರೋ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ಹುಲಿಯೊಂದು ನುಗ್ಗಿರೋದು ಗೊತ್ತಾಗಿದೆ. ಈ ಬಗ್ಗೆ ಕುನೋ ಪಾರ್ಕ್‌ನ ನಿರ್ದೇಶಕ ಉತ್ತಮ್‌ ಶರ್ಮಾ ಮಾಹಿತಿ ನೀಡಿದ್ದು, ದೇಶದಲ್ಲಿ ಆಫ್ರಿಕಾದ ಚೀತಾಗಳ ಸಂಖ್ಯೆ ಹೆಚ್ಚಿಸೋಕೆ ಅವುಗಳನ್ನ ಕುನೋ ಉದ್ಯಾನವನದಲ್ಲಿ ಇರಿಸಲಾಗಿದೆ. ಆದ್ರೆ ರಾಜಸ್ಥಾನದ ಹುಲಿಯೊಂದು ಕುನೋ ಪಾರ್ಕ್‌ ನುಗ್ಗಿರೋದ್ರಿಂದ ಚಿರತೆಗಳು ಭಯ ಪಟ್ಟಿವೆ. ಸದ್ಯ ಇಲ್ಲಿನ ಚೀತಾಗಳಿಗೆ ಹುಲಿಯಿಂದ ಯಾವ್ದೇ ರೀತಿಯ ಡೈರೆಕ್ಟ್‌ ಅಪಾಯ ಇಲ್ಲ ಅಂತ ತಿಳಿಸಿದ್ದಾರೆ. ಅಂದ್ಹಾಗೆ 2-3 ದಿನಗಳ ಹಿಂದೆ ಕುನೋ ಪಾರ್ಕ್‌ ಒಳಗೆ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಈ ಹುಲಿಗೆ ಸುಮಾರು ಮೂರು ವರ್ಷವಾಗಿದ್ದು, ರಾಜಸ್ಥಾನದ ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶದಿಂದ ತಪ್ಪಿಸ್ಕೊಂಡು ಇಲ್ಲಿಗೆ ಬಂದಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply