ಫಿಟ್‌ನೆಸ್‌ ಚಾಲೆಂಜ್‌, ಅತಿಯಾಗಿ ನೀರು ಕುಡಿದು ಆಸ್ಪತ್ರೆ ಸೇರಿದ ಟಿಕ್‌ಟಾಕರ್‌!

masthmagaa.com:

ಇತ್ತೀಚೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಫಿಟ್‌ನೆಸ್‌ ಚಾಲೆಂಜ್‌ ಅದು ಇದು ಅಂತ ಏನೇನೋ ಬರ್ತಿರುತ್ತೆ. ಅದೇ ರೀತಿ ಟಿಕ್‌ಟಾಕ್‌ನಲ್ಲಿ ವೈರಲ್‌ ಆಗಿರುವ ಫಿಟ್‌ನೆಸ್‌ ಚಾಲೆಂಜ್‌ ಒಂದನ್ನ ಫಾಲೋ ಮಾಡೋಕೆ ಹೋಗಿ ದಿನಕ್ಕೆ 4 ಲೀಟರ್‌ ನೀರು ಕುಡಿದು ಕೆನಡಾದ ಟಿಕ್‌ಟಾಕರ್‌ ಒಬ್ರು ಆಸ್ಪತ್ರೆ ಸೇರಿದ್ದಾರೆ. ʻ75 ಹಾರ್ಡ್‌ʼ ಅನ್ನೊ ಹೆಸರಿನ ಈ ಫಿಟ್‌ನೆಸ್‌ ಚಾಲೆಂಜ್‌ ತೆಗದುಕೊಳ್ಳೋರು 75 ದಿನಗಳ ಕಾಲ ದಿನಕ್ಕೆ 4 ಲೀಟರ್‌ ನೀರು ಕುಡಿಬೇಕು. ಜೊತೆಗೆ 2 ಗಂಟೆ 45 ನಿಮಿಷ ವರ್ಕೌಟ್‌ ಮಾಡ್ಬೇಕು ಹಾಗೂ 10 ಪೇಜ್‌ ಬುಕ್‌ ಓದೋದ್ರ ಜೊತೆಗೆ ಡೈಲಿ ಪ್ರೋಗ್ರೆಸ್‌ನ ಪೋಟೋ ಅಪ್‌ಲೋಡ್‌ ಮಾಡ್ಬೇಕು ಅನ್ನೋದಾಗಿತ್ತು. ಇದನ್ನ ಫಾಲೋ ಮಾಡಿದ್ದ 12ನೇ ದಿನಕ್ಕೆ ಆರೋಗ್ಯ ಸಮಸ್ಯೆಯಿಂದ ಮಿಚೆಲ್‌ ಅನ್ನೋ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಅತಿಯಾದ ನೀರು ಸೇವನೆಯಿಂದ hyponatremia ಅಥವಾ ಸೋಡಿಯಂ ಡಿಫಿಷಿಯನ್ಸಿ ಉಂಟಾಗಿದ್ದು, ಇದಕ್ಕೆ ಚಿಕಿತ್ಸೆ ಕೊಡದೇ ಇದ್ರೆ ಜೀವಕ್ಕೆ ಅಪಾಯ ಉಂಟಾಗೋ ಸಾಧ್ಯತೆಯಿದೆ ಅಂತ ಡಾಕ್ಟರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply