ಶ್ರೀಮಂತರನ್ನ ಬಲಿಕೊಡಲು ಪ್ಲಾನ್‌ ಮಾಡಿದ್ರ ಓಚನ್‌ಗೇಟ್‌ ಕಂಪನಿ ಸಿಇಒ?

masthmagaa.com:

ಸ್ನೇಹಿತರೇ ಇತ್ತೀಚೆಗೆ ಟೈಟಾನಿಕ್‌ ಅವಶೇಷಗಳನ್ನ ನೋಡೋಕೆ ಹೋಗಿದ್ದ 5 ಜನ ಶ್ರೀಮಂತರು ಸಬ್‌ಮರ್ಸಿಬಲ್‌ನಲ್ಲಿ ಸಾವನ್ನಪ್ಪಿದ್ದು ನಿಮಗೆಲ್ಲಾ ಗೊತ್ತಿರಬೋದು. ಇದರಲ್ಲಿ ಓಷನ್‌ಗೇಟ್‌ ಕಂಪನಿಯ ಸಿಇಒ ಅಂದ್ರೆ ಈ ಸಬ್‌ಮರ್ಸಿಬಲ್‌ ಕಂಪನಿಯ ಮುಖ್ಯಸ್ಥ, ಸ್ಕಾಟಕ್‌ಟನ್‌ ರಶ್‌ ಕೂಡ ಸಾವನ್ನಪ್ಪಿದ್ರು. ಇದೀಗ ಅವ್ರ ಬಗ್ಗೆ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರಬರ್ತಿವೆ. ಈ ಪ್ರವಾಸ ಇದೇ ರೀತಿ ಭಯಾನಕವಾಗಿ ಕೊನೆಗೊ‍ಳ್ಳುತ್ತೆ ಅನ್ನೋದು ರಶ್‌ಗೆ ಮೊದಲೇ ಗೊತ್ತಿತ್ತು. ಆದ್ರೂ ಅವ್ರು ಬಿಲಿಯನೇರ್‌ಗಳನ್ನ ಮೌಸ್‌ಟ್ರ್ಯಾಪ್ ಅಂದ್ರೆ ಸಿಕ್ಕಿಹಾಕಿಸೋ ಸಲುವಾಗಿ ಸಬ್‌ಮರ್ಸಿಬಲ್‌ನ್ನ ಡೆವಲಪ್‌ ಮಾಡಿದ್ರು ಅಂತ ರಶ್‌ರ ಸ್ನೇಹಿತ ಕಾರ್ಲ್‌ ಸ್ಟ್ಯಾನ್ಲೇ ಅನ್ನೋರು ಇಂಟರ್‌ವ್ಯೂ ಒಂದ್ರಲ್ಲಿ ಹೇಳಿದ್ದಾರೆ. ಟೈಟಾನ್‌ ಜಲಾಂತರ್ಗಾಮಿಯಲ್ಲಿ ಬಳಸಿದ್ದ ಕಾರ್ಬನ್‌ ಫೈಬರ್‌ ಮತ್ತು ಟೈಟಾನಿಯಂ ಕ್ರಾಫ್ಟ್‌ ಅಪಾಯಕಾರಿ ಅನ್ನೋದು ರಶ್‌ರಿಗೆ ತಿಳಿದಿತ್ತು. ಅಷ್ಟೆ ಅಲ್ಲ ಈ ಪ್ರಯಾಣ ದುರಂತದಿಂದಲೇ ಕೊನೆಯಾಗಲಿದೆ ಅನ್ನೋದು ಕೂಡ ಗೊತ್ತಿತ್ತು. ಆದ್ರೆ ಇತಿಹಾಸದಲ್ಲಿ ತನ್ನ ಹೆಸರು ಉಳೀಬೇಕು ಅನ್ನೋ ತೆವಲಿನಿಂದ ಆತ ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಈ ರೀತಿ ಮಾಡಿದ್ದಾನೆ. ಈ ಕಾರಣಕ್ಕಾಗಿ ಅವನೇ ಬಿಲಿಯನೇರ್‌ಗಳನ್ನ ಸಿಕ್ಕಿಸಿದ್ದ ಅಂತ ಕಾರ್ಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply