ಹೌತಿ ದಾಳಿ ತಡೆಯೋಕೆ ಅಮೆರಿಕ ಜೊತೆ 20 ರಾಷ್ಟ್ರಗಳು!

masthmagaa.com:

ಕೆಂಪು ಸಮುದ್ರದಲ್ಲಿ ಯೆಮೆನ್‌ ಹೌತಿಗಳ ಕಾಟ ಜಾಸ್ತಿಯಾಯ್ತು, ಇದನ್ನ ಹೇಗಾದ್ರೂ ತಡಿಬೇಕು ಅಂತ ಅಮೆರಿಕ ʻಮಲ್ಟಿನ್ಯಾಷನಲ್‌ ಫೋರ್ಸ್‌ʼನ್ನ ಲಾಂಚ್‌ ಮಾಡೋದಾಗಿ ಅನೌನ್ಸ್‌ ಮಾಡಿತ್ತು. ಇದೀಗ ಅಮೆರಿಕ ಕೈಗೊಂಡ ಈ ಫೋರ್ಸ್‌ನಲ್ಲಿ ಭಾಗಿಯಾಗೋಕೆ 20ಕ್ಕೂ ಅಧಿಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಹೀಗಂತ ಅಮೆರಿಕದ ರಕ್ಷಣಾ ಇಲಾಖೆ ಡಿಸೆಂಬರ್‌ 21 ರಂದು ಹೇಳಿಕೊಂಡಿದೆ. ಆದ್ರೆ ಇದಕ್ಕೆ ಒಪ್ಪಿ ಸೈನ್‌ ಹಾಕಿರೋ ರಾಷ್ಟ್ರಗಳ ಪೈಕಿ ಕನಿಷ್ಠ 8 ರಾಷ್ಟ್ರಗಳು ತಮ್ಮ ಹೆಸರನ್ನ ಬಹಿರಂಗ ಮಾಡೋ ಬಗ್ಗೆ ನಿರಾಕರಿಸಿವೆ ಅಂತ ಹೇಳಲಾಗಿದೆ. ಅಂದ್ಹಾಗೆ ಇತ್ತೀಚಿನ ದಿನಗಳಲ್ಲಿ ಕೆಂಪು ಸಮುದ್ರದಲ್ಲಿ ಯೆಮೆನ್‌ ಹೌತಿಗಳು ಬ್ಯಾಕ್‌ ಟು ಬ್ಯಾಕ್‌ ದಾಳಿ ನಡೆಸಿದ್ವು. ಇದ್ರಿಂದ ಎದೆಷ್ಟೋ ಶಿಪ್ಪಿಂಗ್‌ ಕಂಪನಿಗಳು ಕೆಂಪು ಸಮುದ್ರದಲ್ಲಿ ಕಾರ್ಯಚರಿಸೋದನ್ನೆ ನಿಲ್ಲಿಸಿದ್ವು. ಇದ್ರಿಂದ ಜಾಗತಿಕ ವ್ಯಾಪಾರ ಮೇಲೆ ತೀವ್ರ ಪರಿಣಾಮ ಬೀರ್ತಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply