ಷೇರುಪೇಟೆ: ಬ್ಯಾಕಿಂಗ್‌ & ಫಿನಾನ್ಶಿಯಲ್‌ ಸ್ಟಾಕ್‌ಗಳ ಭರ್ಜರಿ ಖರೀದಿ

masthmagaa.com:

ವಾರದ ಮೊದಲ ಸೆಷನ್‌ನಲ್ಲಿ ಭಾರತದ ಷೇರುಪೇಟೆ ಉತ್ತಮ ಪರ್ಫಾಮೆನ್ಸ್‌ ನೀಡಿ…ಒಳ್ಳೆ ಲಾಭ ಮಾಡ್ಕೊಂಡಿದೆ. ಬ್ಯಾಕಿಂಗ್‌ ಮತ್ತು ಫಿನಾನ್ಶಿಯಲ್‌ ಸ್ಟಾಕ್‌ಗಳನ್ನ ಅತೀ ಹೆಚ್ಚು ಖರೀದಿ ಮಾಡಲಾಗಿದ್ದು… ಇಂದಿನ ಷೇರುಮಾರುಕಟ್ಟೆಗೆ ಬಲ ತುಂಬಿದೆ. ಹೂಡಿಕೆದಾರರು ಸುಮಾರು 3 ಲಕ್ಷ ಕೋಟಿ ರೂಪಾಯಿ ಲಾಭ ಮಾಡ್ಕೊಂಡಿದ್ದಾರೆ. ಸ್ಮಾಲ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್‌ ಕಂಪನಿಗಳ ಉತ್ತಮ ವಹಿವಾಟಿನಿಂದ ಷೇರುಪೇಟೆ ಹಸಿರುಪಟ್ಟಿಯಲ್ಲಿ ಅಂತ್ಯವಾಗಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 941 ಪಾಯಿಂಟ್ಸ್‌ ಏರಿಕೆಯಾಗಿ 74,671.28ಕ್ಕೆ ತಲುಪ್ತು. ಇನ್ನು ನಿಫ್ಟಿ 223 ಪಾಯಿಂಟ್ಸ್‌ ಗಳಿಸಿ 22,643.40ಕ್ಕೆ ಏರಿಕೆಯಾಯ್ತು. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 09 ಪೈಸೆ ಕಡಿಮೆಯಾಗಿ 83.47 ಆಗಿದೆ. (83 ರೂಪಾಯಿ 47 ಪೈಸೆ).

-masthmagaa.com

Contact Us for Advertisement

Leave a Reply