ಮಂಗಳವಾರ ನೀರಸ ಪ್ರದರ್ಶನ ತೋರಿದ ಷೇರು ಮಾರುಕಟ್ಟೆ!

masthmagaa.com:

ಎರಡು ದಿನಗಳ ಲಾಭದ ನಂತರ ಮಂಗಳವಾರ ಭಾರತದ ಶೇರ್‌ ಮಾರ್ಕೆಟ್‌ ನೀರಸ ಪ್ರದರ್ಶನ ತೋರಿದೆ. ಜಾಗತಿಕ ಮಾರ್ಕೆಟ್‌ಗಳ ಮಿಕ್ಸೆಡ್‌ ಟ್ರೆಂಡ್‌ನಿಂದಾಗಿ ದಿನದ ಆರಂಭದಲ್ಲೆ ಹೂಡಿಕೆದಾರರು ತಮ್ಮ ಶೇರುಗಳನ್ನ ಶೆಲ್‌ ಆಫ್‌ ಮಾಡಿದ್ದಾರೆ. ಇದ್ರಿಂದ ಆರಂಭದಲ್ಲಿ ಮಾರ್ಕೆಟ್‌ ಗ್ರೀನ್‌ ಟ್ರೆಂಡ್‌ನಲ್ಲಿದ್ರೂ, ನಂತರ ಕೆಂಪು ದಾರಿಗೆ ಜಾರಿದೆ. ಮಹಿಂದಾ XUV 3XO ಕಾರಿನ ಲಾಂಚ್‌ ಅಟೊಮೊಟಿವ್‌ ಸೆಕ್ಟರ್‌ಗೆ ಬೂಸ್ಟ್‌ ನೀಡಿದೆ. ಮಹಿಂದ್ರಾ ಅಂಡ್‌ ಮಹಿಂದ್ರಾ ಶೇರು ಬೆಲೆ 4.75%ನ ದಾಖಲೆ ಗಳಿಕೆ ಕಂಡು ₹2,159.90ಕ್ಕೆ ತಲುಪಿದೆ. ಅಟೊಮೊಟಿವ್‌ ಶೇರುಗಳು ಮಾರ್ಕೆಟ್‌ಗೆ ಹೆಚ್ಚಿನ ನಷ್ಟವಾಗೋದನ್ನ ತಡೆದಿವೆ. ಇನ್ನು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 188.50 ಪಾಯಿಂಟ್ಸ್‌ ಕಳೆದುಕೊಂಡು 74,482ಕ್ಕೆ ತಲುಪಿದ್ರೆ, ನಿಫ್ಟಿ 38 ಪಾಯಿಂಟ್‌ ಕಳೆದುಕೊಂಡು 22,604ಕ್ಕೆ ತಲುಪಿದೆ.

-masthmagaa.com

Contact Us for Advertisement

Leave a Reply