ಷೇರುಪೇಟೆ: ತಕ್ಕಮಟ್ಟಿಗೆ ಲಾಭ ಗಳಿಸಿ, ಹಸಿರುಪಟ್ಟಿಯಲ್ಲಿ ಸೆಟಲ್‌

masthmagaa.com:

ವಾರದ ಮೂರನೇ ಸೆಷನ್‌ನಲ್ಲಿ ಭಾರತ ಷೇರುಪೇಟೆ ಅತ್ಯುತ್ತಮ ಅನ್ನೋ ರೀತಿನಲ್ಲಿ ಪ್ರದರ್ಶನ ನೀಡದೇ ತಕ್ಕಮಟ್ಟಿಗೆ ಲಾಭ ಗಳಿಸಿದೆ. ಅಮೆರಿಕದಲ್ಲಿ ಮಾನಿಟರಿ ಪಾಲಿಸಿ ಮೀಟಿಂಗ್‌ ನಡೆದಿದ್ದು, ಈ ವೇಳೆ ಅಮೆರಿಕ ಫೆಡರಲ್‌ ರಿಸರ್ವ್‌ನ ಬ್ಯಾಂಕಿಂಗ್‌ ರೇಟ್‌ಗಳಲ್ಲಿ ಯಾವ್ದೇ ಬದಲಾವಣೆ ಆಗದೇ ಇರೋ ಕಾರಣ ಷೇರುಪೇಟೆ ಕಾಮ್‌ ಆಗಿ ವಹಿವಾಟು ನಡೆಸಿದೆ. ನಿಫ್ಟಿಯಲ್ಲಿ, BPCL, ಪವರ್‌ ಗ್ರಿಡ್‌ ಮತ್ತು ಏಷ್ಯನ್‌ ಪೇಂಟ್ಸ್‌ ಟಾಪ್‌ ಗೇನರ್ಸ್‌. ಇನ್ನು ಕೋಟಕ್‌ ಮಹೀಂದ್ರ ಬ್ಯಾಂಕ್‌, ಟಾಟಾ ಕನ್ಸೂಮರ್‌ ಮತ್ತು ಭಾರತಿ ಏರ್ಟೆಲ್‌ ಟಾಪ್‌ ಲೂಸರ್ಸ್‌ ಆಗಿ ಹೊರಹೊಮ್ಮಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 128 ಪಾಯಿಂಟ್ಸ್‌ ಏರಿಕೆಯಾಗಿ 74,611.11ಕ್ಕೆ ತಲುಪ್ತು. ಇನ್ನು ನಿಫ್ಟಿ 43 ಪಾಯಿಂಟ್ಸ್‌ ಗಳಿಸಿ 22,648.20ಕ್ಕೆ ಸೆಟಲ್‌ ಆಯ್ತು. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 03 ಪೈಸೆ ಕಡಿಮೆಯಾಗಿ 83.46 ಆಗಿದೆ. (83 ರೂಪಾಯಿ 46 ಪೈಸೆ).

-masthmagaa.com

Contact Us for Advertisement

Leave a Reply