ಷೇರುಪೇಟೆ: ರಿಲಯನ್ಸ್‌ & HDFC ಸ್ಟಾಕ್‌ಗಳ ಭಾರೀ ಸೆಲ್‌-ಆಫ್‌!

masthmagaa.com:

ಭಾರತದ ಷೇರುಪೇಟೆ ಇಂದು ಭಾರೀ ಹಿನ್ನಡೆ ಅನುಭವಿಸಿದೆ. ಹೆವಿವೈಟ್‌ ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು HDFC ಬ್ಯಾಂಕ್‌ಗಳ ಸ್ಟಾಕ್‌ಗಳಲ್ಲಿ ಭಾರಿ ಸೆಲ್‌ ಆಫ್‌ ಆಗಿದ್ದು…. ಷೇರುಪೇಟೆ ದಿಢೀರ್‌ ಅಂತ ಕೆಂಪುಪಟ್ಟಿಗೆ ಇಳಿದಿದೆ. ಹೂಡಿಕೆದಾರರು ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಸ್‌ ಮಾಡಿಕೊಂಡಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಭಾರತೀಯ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಏರಿಳಿತ ಕಂಡಿದ್ದು, ಕಳೆದ ಐದು ಸೆಷನ್‌ಗಳಲ್ಲಿ ನಿಫ್ಟಿ ಪಾಯಿಂಟ್ಸ್‌ನಲ್ಲಿ ಭಾರೀ ಫ್ಲಕ್ಚುವೇಷನ್‌ಗಳಾಗಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ ಬರೋಬ್ಬರಿ 732.96 ಪಾಯಿಂಟ್ಸ್‌ ಕಡಿಮೆಯಾಗಿ 73,878.15ಕ್ಕೆ ಕುಸಿದಿದೆ. ಇನ್ನು ನಿಫ್ಟಿ 172.35 ಪಾಯಿಂಟ್ಸ್‌ ಕಳೆದುಕೊಂಡು 22,475.85ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 03 ಪೈಸೆ ಜಾಸ್ತಿಯಾಗಿ 83.43 ಆಗಿದೆ. (83 ರೂಪಾಯಿ 43 ಪೈಸೆ).

-masthmagaa.com

Contact Us for Advertisement

Leave a Reply