ಷೇರುಪೇಟೆ: ಸ್ಟಾಕ್‌ಗಳ ಭಾರೀ ಖರೀದಿ, ಜಿಗಿದ ಸೆನ್ಸೆಕ್ಸ್‌, ನಿಫ್ಟಿ!

masthmagaa.com:

ಗುರುವಾರದ ಸೆಷನ್‌ನಲ್ಲಿ ಭಾರತದ ಷೇರುಪೇಟೆ ಕುಣಿದು ಕುಪ್ಪಳಿಸಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಭಾರತ ಸ್ಟಾಕ್‌ಗಳ ಭಾರೀ ಬೈಯಿಂಗ್‌ ನಡೆದಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ ಒಂದಲ್ಲ ಎರಡಲ್ಲ ಬರೋಬ್ಬರಿ 1197 ಪಾಯಿಂಟ್ಸ್‌ ಏರಿಕೆಯಾಗಿ 75,418.04ಕ್ಕೆ ತಲುಪಿದೆ. ಸೆನ್ಸೆಕ್ಸ್‌ನ ಒಟ್ಟು 27 ಸ್ಟಾಕ್‌ಗಳು ಹಸಿರುಪಟ್ಟಿಯಲ್ಲಿ ಅಬ್ಬರಿಸಿವೆ. ಇನ್ನು ನಿಫ್ಟಿ 370 ಪಾಯಿಂಟ್ಸ್‌ ಗಳಿಸಿ 22,967.65ಕ್ಕೆ ಏರಿಕೆಯಾಗಿದೆ. ನಿಫ್ಟಿಯ ಒಟ್ಟು 44 ಸ್ಟಾಕ್‌ಗಳು ಲಾಭ ಪಡೆದು ಅವೂ ಕೂಡ ಹಸಿರು ಪಟ್ಟಿಲೀ ಕಾಣಿಸಿಕೊಂಡಿವೆ. ಇನ್ನು ಭಾರತದ ಶೇರು ಮಾರುಕಟ್ಟೆ ಈ ರೀತಿ ದಿಢೀರ್‌ ಏರಿಕೆಯಾಗೋಕೆ ಅನೇಕ ಕಾರಣಗಳನ್ನ ಎಕ್ಸ್‌ಪರ್ಟ್‌ಗಳು ಕೊಡ್ತಿದ್ದಾರೆ. 2024ರ ಆರ್ಥಿಕ ವರ್ಷದಲ್ಲಿ RBI ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಲಾಭಾಂಶವನ್ನ ಟ್ರಾನ್ಸ್‌ಫರ್‌ ಮಾಡೋದಾಗಿ ಅನೌನ್ಸ್‌ ಮಾಡಿರೋ ಕಾರಣ ಷೇರುಪೇಟೆಗೆ ಬಲ ಸಿಕ್ಕಿದೆ ಅಂತೇಳಿದ್ದಾರೆ. ಯಾಕಂದ್ರೆ… ಜೂನ್‌ನಲ್ಲಿ ಸ್ಥಾಪನೆಯಾಗೋ ಹೊಸ ಸರ್ಕಾರಕ್ಕೆ ಇನ್ಫ್ರಾಸ್ಟ್ರಕ್ಚರ್‌ ಮೇಲೆ ಹೂಡಿಕೆ ಮಾಡೋಕೆ ಹೆಚ್ಚಿನ ಹಣ ಕೈಗೆ ಸಿಕ್ಕಂತಾಗುತ್ತೆ. ಹೀಗಾಗಿ ಸಾರ್ವಜನಿಕ ಉದ್ದಿಮೆಗಳಾದ ರೈಲು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆದಾರರು ಹೆಚ್ಚಿನ ಶೇರು ಖರೀದಿಸಿದ್ದಾರೆ. GRSE, ಅಂದ್ರೆ Garden Reach Shipbuilders & Engineers ಮತ್ತು ಕೊಚಿನ್‌ ಶಿಪ್‌ಯಾರ್ಡ್‌ ಅಂಡ್ ಮಜಗಾನ್‌ ಡಾಕ್‌ ಶಿಪ್‌ ಷೇರುಗಳು ಭರ್ತಿ 20%ನಷ್ಟು ಏರಿವೆ. ಇನ್ನು RVNL ಅಂದ್ರೆ Rail Vikas Nigam ಮತ್ತು IRFC ಅಂದ್ರೆ Indian Railway Finance Corporationನ ಸ್ಟಾಕ್ಸ್‌ ಸುಮಾರು 7ರಿಂದ 8% ಏರಿಕೆ ಕಂಡಿವೆ. ಜೊತೆಗೆ HDFC, ICICI ಮತ್ತು ಆಕ್ಸಿಸ್‌ ಬ್ಯಾಂಕ್‌ನಂತಹ ಹೆವಿವೈಟ್‌ ಬ್ಯಾಂಕಿಂಗ್‌ ಸ್ಟಾಕ್‌ಗಳಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿಗೆ ಗುರುವಾರ ಶುಕ್ರ ದೆಸೆ ಒದಗಿ ಬಂದಿದೆ. ವಿಶೇಷವಾಗಿ ದೇಶೀಯ ಹೂಡಿಕೆದಾರರು ಈ ಸಲ ಷೇರುಪೇಟೆಯಲ್ಲಿ ಖರೀದಿಗೆ ಮುಗಿಬಿದ್ದು, ಷೇರುಪೇಟೆ ಹಸಿರಾಗೋಕೆ ಕಾರಣವಾಗಿದ್ದಾರೆ.

-masthmagaa.com

Contact Us for Advertisement

Leave a Reply