ಷೇರುಪೇಟೆ: ಆರ್ಥಿಕ ವರ್ಷದ ಮೊದಲ ದಿನ ಷೇರುಪೇಟೆಗೆ ಹಸಿರು ಭಾಗ್ಯ

masthmagaa.com:

ವಾರದ ಮೊದಲ ದಿನ…ಆರ್ಥಿಕ ವರ್ಷದ ಮೊದಲ ದಿನ…ಷೇರು ಮಾರುಕಟ್ಟೆ ಉತ್ತಮ ಪರ್ಫಾಮೆನ್ಸ್‌ ನೀಡಿ ಹಸಿರು ಪಟ್ಟಿಯಲ್ಲಿ ದಿನದ ವಹಿವಾಟನ್ನ ಅಂತ್ಯಗೊಳಿಸಿದೆ. ದೇಶೀಯ ಮಾರುಕಟ್ಟೆ ಮೇಲಿನ ಭರವಸೆ ಮೇರೆಗೆ ಹೂಡಿಕೆದಾರರು ವಿವಿಧ ಸೆಕ್ಟರ್‌ಗಳಲ್ಲಿ ಷೇರು ಖರೀದಿಸಿದ್ದಾರೆ. ಜೊತೆಗೆ ಒಂದೇ ದಿನಕ್ಕೆ ಒಟ್ಟು 6 ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಕಂಪನಿಗಳು ಚೆನ್ನಾಗಿ ಪರ್ಫಾಮೆನ್ಸ್‌ ನೀಡಿ ಸೆನ್ಸೆಕ್ಸ್‌ಗೆ ಬೂಸ್ಟ್‌ ನೀಡಿವೆ. ಇನ್ನು JSW ಸ್ಟೀಲ್‌, ಟಾಟಾ ಸ್ಟೀಲ್‌ ಮತ್ತು ದಿವಿಸ್‌ ಲ್ಯಾಬೊರೇಟರಿಯ ಸೇರಿ ನಿಫ್ಟಿಯ ಒಟ್ಟು 31 ಸ್ಟಾಕ್‌ಗಳು ಲಾಭ ಮಾಡ್ಕೊಂಡಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 363 ಪಾಯಿಂಟ್ಸ್‌ ಅಥ್ವಾ 0.49% ಏರಿಕೆಯಾಗಿ 74,014.55ಕ್ಕೆ ತಲುಪಿದೆ. ಇನ್ನು ನಿಫ್ಟಿ 135 ಪಾಯಿಂಟ್ಸ್‌ ಅಥ್ವಾ 0.61% ಗಳಿಸಿ 22,462ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ ಯಾವುದೇ ಬದಲಾವಣೆ ಇಲ್ಲದೇ 83.39 ಆಗಿದೆ. (83 ರೂಪಾಯಿ 39 ಪೈಸೆ).

-masthmagaa.com

Contact Us for Advertisement

Leave a Reply