ಷೇರುಪೇಟೆ: ಸುಸ್ತಾದ ದೇಶೀಯ ಕಂಪನಿಗಳು, ಕೆಂಪು ಪಟ್ಟಿಯಲ್ಲಿ ಅಂತ್ಯ!

masthmagaa.com:

ಆರ್ಥಿಕ ವರ್ಷದ ಮೊದಲ ದಿನವೇ ಹಸಿರು ಪಟ್ಟಿಯಲ್ಲಿ ಉಳಿದು ಒಳ್ಳೆ ಸೂಚನೆ ನೀಡಿದ್ದ ಷೇರುಪೇಟೆ…ಎರಡನೇ ದಿನ ನೆಲಕ್ಕೆ ಕುಸಿದಿದೆ. ವಾರದ ಮೊದಲ ಸೆಷನ್‌ನಲ್ಲಿ ಉತ್ತಮ ಪರ್ಫಾಮೆನ್ಸ್‌ ನೀಡಿದ್ದ ದೇಶೀಯ ಕಂಪನಿಗಳು…ಇಂದು ಸುಸ್ತಾಗಿ ಮೂಲೆಗೆ ಸೇರಿವೆ. ಇನ್ನು ಆಯ್ದಾ ಖಾಸಗಿ ಬ್ಯಾಂಕ್‌ಗಳ ಷೇರು ಪ್ರಾಫಿಟ್‌ ಬುಕಿಂಗ್‌ ಆಗಿ, ಜಾಗತಿಕ ಸ್ಟಾಕ್‌ ಮಾರ್ಕೆಟ್‌ನ ವೀಕ್‌ ಪರ್ಫಾಮೆನ್ಸ್‌ ಮತ್ತು ವಿದೇಶಿ ಹೂಡಿಕೆಯ ಒಳಹರಿವು ಷೇರುಪೇಟೆಗೆ ಪೆಟ್ಟು ನೀಡಿವೆ. ಆದ್ರಿಂದ ಸೆನ್ಸೆಕ್ಸ್‌ನ 30 ಷೇರುಗಳೂ ಕೆಂಪು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 110.64 ಪಾಯಿಂಟ್ಸ್‌ ಅಥ್ವಾ 0.15% ಇಳಿಕೆಯಾಗಿ 73,903.91ಕ್ಕೆ ತಲುಪಿದೆ. ಇನ್ನು ನಿಫ್ಟಿ 8.70 ಪಾಯಿಂಟ್ಸ್‌ ಅಥ್ವಾ 0.04% ಕಳೆದುಕೊಂಡು 22,453.30ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ ಯಾವುದೇ ಬದಲಾವಣೆ ಇಲ್ಲದೇ 83.39 ಆಗಿದೆ. (83 ರೂಪಾಯಿ 39 ಪೈಸೆ).

-masthmagaa.com

Contact Us for Advertisement

Leave a Reply