ಷೇರುಪೇಟೆ: ಫ್ಲ್ಯಾಟ್‌ ಆಗಿ ದಿನದ ವಹಿವಾಟು ಅಂತ್ಯ!

masthmagaa.com:

ಜಾಗತಿಕ ಸ್ಟಾಕ್‌ ಮಾರ್ಕೆಟ್‌ನ ವೀಕ್‌ ಪರ್ಫಾಮೆನ್ಸ್‌ ಟ್ರೆಂಡ್‌ ಮುಂದುವರೆದಿದ್ದು, ಹೊಸ ಆರ್ಥಿಕ ಸಾಲಿನ ಮೂರನೇ ದಿನ ಭಾರತದ ಷೇರುಪೇಟೆ ಕೂಡ ಫ್ಲ್ಯಾಟ್‌ ಆಗಿದೆ. ನಿಫ್ಟಿಯ ಒಟ್ಟು 20 ಸ್ಟಾಕ್‌ಗಳು ಹಸಿರುಪಟ್ಟಿಯಲ್ಲಿ ಕಾಣಿಸಿಕೊಂಡ್ರೆ…ಉಳಿದ 30 ಸ್ಟಾಕ್‌ಗಳು ಕೆಂಪಾಗಿವೆ. ಶ್ರೀರಾಮ್‌ ಫಿನಾನ್ಸ್‌, NTPC, ಡಿವಿಸ್‌ ಲ್ಯಾಬೊರೇಟರಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಮತ್ತು ಟೆಕ್‌ ಮಹೀಂದ್ರ ಟಾಪ್‌ ಗೇನರ್ಸ್‌ ಪಟ್ಟಿಯಲ್ಲಿವೆ. ಇನ್ನು ನೆಸ್ಲೆ ಇಂಡಿಯಾ, ಬಜಾಜ್‌ ಆಟೋ, ಡಾ ರೆಡ್ಡೀಸ್‌ ಲ್ಯಾಬೊರೇಟರಿ, ಕೋಟಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್‌ ನಷ್ಟ ಮಾಡ್ಕೊಂಡಿವೆ. ಆದ್ರೆ ಪಬ್ಲಿಕ್‌ ಸೆಕ್ಟರ್‌ ಬ್ಯಾಂಕ್‌ ಮತ್ತು ಐಟಿ ಕಂಪನಿಗಳ ಸ್ಟಾಕ್‌ಗಳು ಇಂದಿನ ವಹಿವಾಟಿನಲ್ಲಿ ಒಳ್ಳೆ ಫಲಿತಾಂಶ ನೀಡಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 27.09 ಪಾಯಿಂಟ್ಸ್‌ ಅಥ್ವಾ 0.04% ಇಳಿಕೆಯಾಗಿ 73,876.82ಕ್ಕೆ ತಲುಪಿದೆ. ಇನ್ನು ನಿಫ್ಟಿ 18.65 ಪಾಯಿಂಟ್ಸ್‌ ಅಥ್ವಾ 0.08% ಕಳೆದುಕೊಂಡು 22,434.65ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 2 ಪೈಸೆ ಇಳಿಕೆಯಾಗಿ 83.44 ಆಗಿದೆ. (83 ರೂಪಾಯಿ 44 ಪೈಸೆ).

-masthmagaa.com

Contact Us for Advertisement

Leave a Reply