ಪ್ರೀತಿಯೊಂದಿಗೆ ಬದುಕಿನ ವಾಸ್ತವಗಳ ಬಿಚ್ಚಿಡುವ ‘ಟಾಮ್ ಅಂಡ್ ಜೆರ್ರಿ’: ನವೆಂಬರ್ 12 ಕ್ಕೆ ಬಿಡುಗಡೆ!

masthmagaa.com:

ಕಾರ್ಟೂನ್ ಸೀರಿಸ್ ಗಳಲ್ಲೇ ಎಲ್ಲರೂ ಇಷ್ಟ ಪಡೋ ಸೀರೀಸ್ ಅಂದ್ರೆ ಅದು ಟಾಮ್ ಅಂಡ್ ಜೆರ್ರಿ. ಟಾಮ್ ಹಾಗೂ ಜೆರ್ರಿಯ ಮುದ್ದಾದ ಕಿತ್ತಾಟವೇ ಒಮ್ಮೆಲೆ ಎಲ್ಲ ನೋವನ್ನ ಮರೆಸಿ ನಗು ತರಿಸುತ್ತೆ. ಈಗ ಇದೇ ಹೆಸರಿನಲ್ಲಿ ರೆಡಿಯಾದ ಸಿನೆಮಾ ಟಾಮ್ ಅಂಡ್ ಜೆರ್ರಿ ಇದೇ ೧೨ ಕ್ಕೆ ತೆರೆಗೆ ಅಪ್ಪಳಿಸಲಿದೆ. ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಈ ಟಾಮ್ ಜೆರ್ರಿ ಪ್ರೀತಿಯೊಂದಿಗೆ ಬದುಕಿನ ವಾಸ್ತವತೆ ತೆರೆದಿಡೋ ಸಿನೆಮಾ.  ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡು ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಯಾಕಂದ್ರೆ ರಿಲೀಸ್ ಆದ ಟ್ರೈಲರ್ ನಲ್ಲಿ ಸ್ನೇಹ, ಕೋಪ, ಜಗಳ, ಪ್ರೀತಿ, ಹತಾಶೆ, ಮಾಸ್ ಸನ್ನಿವೇಶಗಳೂ ಕಾಣುತ್ತೆ. ಜೊತೆಗೆ ಇಲ್ಲಿ ಪ್ರೀತಿಯೊಂದಿಗೆ ಬದುಕಿನ ವಾಸ್ತವಗಳು ಗರಿಬಿಚ್ಚಿಕೊಳ್ಳುತ್ತ ಇಂದಿನ ಯೂತ್ಸ್ ಗಳಿಗೊಂದು ಸಂದೇಶವೂ ರವಾನೆಯಾಗುತ್ತೆ.

ಮಧ್ಯಮ ವರ್ಗದ ನಾಯಕನ ಪಾಲಿಗೆ ಕನಸೆಂಬಂತೆ ಉಳಿದಿರೋ ಶ್ರೀಮಂತಿಕೆಯನ್ನು ನನಸಾಗಿಸೋ ಪ್ರಯತ್ನದಲ್ಲಿರೋ ನಾಯಕ, ಸಾಕಪ್ಪಾ ಈ ಶ್ರೀಮಂತಿಕೆ ಅನ್ನಿಸುವಷ್ಟು ಸಿರಿತನ ಹೊದ್ದ ನಾಯಕಿಗೆ ಅದರಾಚೆಗೆ ಇದ್ದು ಜೀವಿಸೋದೆ ನಿಜವಾದ ಜೀವನವೆಂಬ ಮನಸ್ಥಿತಿಗಳು ಪರಸ್ಪರ ಪ್ರೀತಿಸಿದ್ರೆ ಏನೇನೆಲ್ಲ ಘಟಿಸಬಹುದೆಂಬುದು ಚಿತ್ರದ ಜೀವಾಳ.

ಈ ಚಿತ್ರದಲ್ಲಿ ನಿಶ್ಚಿತ್ ಕೊರೋಡಿ ಮತ್ತು ಚೈತ್ರಾ ರಾವ್ ನಾಯಕ ನಾಯಕಿಯರಾಗಿ ಮಿಂಚಲಿದ್ದಾರೆ. ಇನ್ನುಳಿದಂತೆ ಜೈ ಜಗದೀಶ್, ತಾರಾ ಅನುರಾಧ, ಸೂರ್ಯಶೇಖರ್, ಕೋಟೆ ಪ್ರಭಾಕರ್, ಕಟ್ಟಿಪುಡಿ ಚಂದ್ರು, ಪದ್ಮಜಾ ರಾವ್, ರಾಕ್‌ ಲೈನ್ ಸುಧಾಕರ್, ಪ್ರಕಾಶ್ ತುಮ್ಮಿನಾಡು, ಮೈತ್ರಿ ಜಗ್ಗಿ, ಪ್ರಶಾಂತ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.

ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬರ್ತಿರೋ ಈ ಚಿತ್ರಕ್ಕೆ ರಾಜು ಶೇರಿಗಾರ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಮ್ಯಾಥ್ಯುಸ್ ಮನು ಸಂಗೀತ ನಿರ್ದೇಶನ ಸಿನಿಪ್ರೇಮಿಗಳ ಕಿವಿಯಲ್ಲಿ ಗುಂಯಿಗುಡಲಿದ್ದು, ಈಗಾಗಲೇ ರಿಲೀಸ್ ಆಗಿರೋ ಹಾಯಾಗಿದೆ ಎದೆಯೊಳಗೆ ಹಾಡಂತು ಸದ್ಯದ ಎಲ್ಲರ ಹಾರ್ಟ್ ಫೇವರೀಟ್ ಆಗಿದೆ.

ಸಂಕೇತ್ ವೈಎಂಎಸ್ ಛಾಯಾಗ್ರಹಣ ಟಾಮ್ ಅಂಡ್ ಜೆರ್ರಿ ಚಿತ್ರಕಿದ್ದು, ಸೂರಜ್ ಅಂಕೋಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ರಾಜ್ ಕಿಶೋರ್  ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಪ್ರೇಮ ಕಥೆಗೆ ಫ್ಲ್ಯಾಶ್ ಬ್ಯಾಕ್ ನೀಡೋದ್ರ ಜೊತೆಗೆ ಟ್ವಿಸ್ಟನ್ನೂ ಕೂಡಾ ಹೊಂದಿರೋ ಈ ಟಾಮ್ ಅಂಡ್ ಜೆರ್ರಿ ಇದೇ೧೨ ಕ್ಕೆ ತೆರೆಮೇಲೆ ಬರಲು ರೆಡಿಯಾಗಿದೆ.

-masthmagaa.com

Contact Us for Advertisement

Leave a Reply