ತಮಿಳುನಾಡು: ಒಂದು ಕೆಜಿ ಟೊಮೆಟೊ 200 ರೂಪಾಯಿಗೆ ಏರಿಕೆ

masthmagaa.com:

ದೇಶಾದ್ಯಂತ ಏರಿಕೆಯಾಗಿರೋ ಟೊಮೆಟೊ ಬೆಲೆ ಇಳಿಕೆಯಾಗುವ ಲಕ್ಷಣ ಕಾಣ್ತಿಲ್ಲ. ಇದೀಗ ತಮಿಳುನಾಡಿನಲ್ಲಿ ಒಂದು ಕೆಜಿ ಟೊಮೆಟೊ 200 ರೂಪಾಯಿ ತಲುಪಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಳೆಯಿಂದ ಬೆಳೆ ನಷ್ಟವಾಗಿದ್ದು, ತಮಿಳುನಾಡಿನಲ್ಲಿ ಟೊಮೆಟೊ ಕೊರತೆಯಾಗಿದೆ. ಹೀಗಾಗಿ ಬೆಲೆ ಗಗನಕ್ಕೇರಿದೆ. ಇನ್ನು ಒಂದು ವಾರದಲ್ಲಿ ಟೊಮೆಟೊ ಕೆಜಿಗೆ 250 ರೂಪಾಯಿ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇತ್ತ ಟೊಮೆಟೊಗೆ ಚಿನ್ನದ ಬೆಲೆ ಬಂದಿದ್ದೇ ಬಂದಿದ್ದು, ಕಳ್ಳತನ ಪ್ರಕರಣಗಳ ಕೂಡ ಹೆಚ್ಚಾಗುತ್ತಿವೆ. ಮೊನ್ನೆ ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ 24 ಲಕ್ಷ ಮೌಲ್ಯದ ಟೊಮೆಟೊ ಇದ್ದ ಲಾರಿಯೊಂದು ನಾಪತ್ತೆಯಾಗಿತ್ತು. ಇದೀಗ ಈ ಲಾರಿ ಚಾಲಕನೆ ಆರೋಪ ಅಂತ ತಿಳಿದು ಬಂದಿದ್ದು, ಮಾರ್ಗ ಮಧ್ಯೆ ಟೊಮೆಟೊವನ್ನ 11 ಲಕ್ಷಕ್ಕೆ ಮಾರಾಟ ಮಾಡಿ ಚಾಲಕ ನಾಪತ್ತೆಯಾಗಿದ್ದಾರೆ ಅಂತ ತಿಳಿದು ಬಂದಿದೆ. ಈ ಕುರಿತು ಕೇಸ್‌ ದಾಖಲಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆಸಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply