ಹೈಟಿಯಲ್ಲಿ ಮುಂದುವರೆದ ಹಿಂಸಾಚಾರ: ಪ್ರಧಾನಿ ಹುದ್ದೆ ಬಿಡದಿದ್ರೆ ಅಪಾಯ!

masthmagaa.com:

ಹೈಟಿ ದೇಶದಲ್ಲಿ ನಡಿತಿರೊ ಹಿಂಸಾಚಾರ ತೀವ್ರ ಸ್ವರೂಪ ಪಡೀತಾ ಇದೆ. ಹೈಟಿಯ ಹಂಗಾಮಿ ಪ್ರಧಾನಿ ಅಧಿಕಾರದಿಂದ ಕೆಳಗಿಳಿಬೇಕು ಅಂತ ಅಲ್ಲಿನ ಸೇನೆ ಬಂಡಾಯ ಎದ್ದ ಬೆನ್ನಲ್ಲೆ ದೇಶಾದ್ಯಂತ ಮೂರು ದಿನ ಕರ್ಪ್ಯೂ ಜಾರಿಯಾಗಿತ್ತು. ಇದೀಗ ಹೈಟಿಯ ಪ್ರಬಲ ಗ್ಯಾಂಗ್‌ ಲೀಡರ್‌ ಬಾರ್ಬೆಕ್ಯೂ, ಪ್ರಧಾನಿ ಎರಿಯಲ್‌ ಹೆನ್ರಿ ತಮ್ಮ ಹುದ್ದೆಯಿಂದ ಕೆಳಗಿಳಯದಿದ್ರೆ ಹೈಟಿಯಲ್ಲಿ ದೊಡ್ಡ ಪರಿಣಾಮ ಆಗುತ್ತೆ. ಸಾವು-ನೋವುಗಳು ಹೆಚ್ಚಾಗುತ್ವೆ ಅಂತ ಬೆದರಿಕೆ ನೀಡಿದ್ದಾನೆ.. ಅಂದ್ಹಾಗೆ ಈ ಬಾರ್ಬೆಕ್ಯೂ ಈ ಹಿಂದೆ ಪೋಲಿಸ್‌ ಅಧಿಕಾರಿಯಾಗಿದ್ದವ. ಆದ್ರೆ ಅ ಕೆಲಸ ಬಿಟ್ಟು ಗ್ಯಾಂಗ್‌ ಕಟ್ಕೊಂಡು ಅಲ್ಲಿನ ಸರ್ಕಾರ ಕೆಳಗೆ ಇಳೀಬೇಕು ಅಂತ ದಂಗೆಗೆ ಪ್ರಚೋದನೆ ಕೊಡ್ತಿದ್ದಾನೆ.

-masthmagaa.com

Contact Us for Advertisement

Leave a Reply