ಭಾರತದ ಪ್ರವಾಸದಿಂದ ಪಾಕ್‌ಗೆ ಏನು ಲಾಭ: ಇಮ್ರಾನ್‌ ಖಾನ್

masthmagaa.com:

ಪಾಕ್‌ನ ಹಿರಿಯ ಪತ್ರಕರ್ತ ಅರ್ಶದ್‌ ಶರೀಫ್‌ರ ಹತ್ಯೆಯಲ್ಲಿ ISIನ ಟಾಪ್‌ ಅಧಿಕಾರಿ ಇನ್‌ವಾಲ್ವ್‌ ಆಘಿದ್ದಾರೆ ಅಂತ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ. ಲಾಹೋರ್‌ನಲ್ಲಿ ನಡೆದ ತಮ್ಮ ರ್ಯಾಲಿ ವೇಳೆ ಮಾತಾಡಿದ ಖಾನ್‌, ತಮ್ಮನ್ನ ಎರಡು ಬಾರಿ ಹತ್ಯೆ ಮಾಡಲು ಪ್ರಯತ್ನಿಸಿದ್ದ ಮೇಜರ್‌ ಜನರಲ್‌ ಫೈಸಲ್‌ ನಾಸೀರ್‌, ಶರೀಫ್‌ ಹತ್ಯೆಯಲ್ಲೂ ಭಾಗಿಯಾಗಿದ್ದಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಪಾಕ್‌ ಸೇನೆಯನ್ನ ಟೀಕಿಸುತ್ತಿದ್ದ ಪತ್ರಕರ್ತ ಶರೀಫ್‌ ಭದ್ರತಾ ಪಡೆಗಳಿಂದ ತಮ್ಮ ಜೀವಕ್ಕೆ ಬೆದರಿಕೆಯಿದೆ ಅಂತ ಕೀನ್ಯಾಗೆ ತೆರಳಿದ್ರು. ಆದ್ರೆ ಅಲ್ಲೇ ಅವ್ರನ್ನ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಪಾಕಿಸ್ತಾನದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು.

ಇದೇ ವೇಳೆ ಇತ್ತೀಚೆಗೆ SCO ಸಭೆಯ ಭಾಗವಾಗಿ ಭಾರತಕ್ಕೆ ಪ್ರವಾಸ ಬೆಳೆಸಿದ್ದ ಪಾಕ್‌ನ ವಿದೇಶಾಂಗ ಸಚಿವ ಬಿಲಾವಾಲ್‌ ಬುಟ್ಟೊ ಜರ್ಧಾರಿ ವಿರುದ್ದ ಇಮ್ರಾನ್ ಖಾನ್‌ ಕಿಡಿಕಾರಿದ್ದಾರೆ. ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಪ್ರಧಾನಿ ಬ್ರಿಟನ್‌ ರಾಜರ ಪಟ್ಟಾಭಿಷೇಕಕ್ಕೆ ಯುಕೆಗೆ ತೆರಳಿದ್ದಾರೆ, ಇತ್ತ ವಿದೇಶಾಂಗ ಸಚಿವ ಭಾರತಕ್ಕೆ ತೆರಳಿದ್ದಾರೆ. ಜನರ ಹಣದಲ್ಲಿ ಜಗತ್ತಿನಾದ್ಯಂತ ಪ್ರವಾಸ ಕೈಗೊಳ್ತಿರೊ ಬುಟ್ಟೊ, ಪ್ರವಾಸದಿಂದ ನಮಗೆ ಲಾಭ ಇದೆಯಾ ಅಂತ ಯೋಚಿಸಿದ್ದೀರಾ? ಭಾರತಕ್ಕೆ ಹೋಗಿ ಬಂದದ್ದರಿಂದ ಮನಗೆ ಯಾವ ಲಾಭವಾಯಿತು ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply