TRAI ಹೆಸರಲ್ಲಿ ವಂಚನೆ: ಟೆಲಿಕಾಮ್‌ ಕಂಪನಿಗಳಿಗೆ ಅಲರ್ಟ್

masthmagaa.com:

ತನ್ನ ಹೆಸರಲ್ಲಿ ಫೇಕ್‌ ಮೆಸೇಜ್‌ಗಳನ್ನ ಕಳುಹಿಸಲಾಗ್ತಿದೆ ಅಂತ ಟೆಲಿಕಾಮ್‌ ರೆಗುಲೇಟರಿ ಅಥಾರಿಟಿ ಆಫ್‌ ಇಂಡಿಯಾ (TRAI) ಅಲರ್ಟ್‌ ನೀಡಿದೆ. ಸೈಬರ್‌ ಕ್ರಿಮಿನಲ್‌ಗಳು TRAI ಹೆಸರಲ್ಲಿ ಗ್ರಾಹಕರಿಗೆ ಫೇಕ್‌ ಮೆಸೇಜ್‌ ಕಳಿಸಿ ವಂಚನೆ ಮಾಡ್ತಿದ್ದಾರೆ. ಹೀಗಾಗಿ ನೀವು ಕ್ರಮ ತಗೊಳ್ಳಿ ಅಂತ ಸರ್ವೀಸ್‌ ಪ್ರೊವೈಡರ್‌ಗಳಿಗೆ ಆದೇಶ ನೀಡಿದೆ. ಅಂದ್ರೆ ಜಿಯೋ, BSNL, ಏರ್‌ಟೆಲ್‌ ಹಾಗೂ ವೋಡಫೋನ್‌ ಐಡಿಯಾಗಳಿಗೆ ಅಲರ್ಟ್‌ ನೀಡಿದೆ. ಅಲ್ಲದೆ ಈ ಬಗ್ಗೆ ಜನರಿಗೆ ಅವೇರ್‌ನೆಸ್‌ ಕೊಡೋಕೆ ಸಲಹೆ ಹಾಗೂ ಎಚ್ಚರಿಕೆ ಮೆಸೇಜ್‌ ಕಳ್ಸಿ ಅಂತ ಕೇಳಿದೆ. ಸೋ ಇನ್ನು 10 ದಿನಗಳ ಒಳಗೆ ದೇಶದಲ್ಲಿರೋ 115 ಕೋಟಿ ಸಬ್‌ಸ್ಕ್ರೈಬರ್‌ಗಳಿಗೆ, ಅಂದ್ರೆ ಅಷ್ಟು ಸಿಮ್‌ಗಳಿಗೆ TRAI ಅಲರ್ಟ್‌ ಮೆಸೇಜ್‌ನ್ನ ಟೆಲಿಕಾಮ್‌ ಕಂಪನಿಗಳು ಕಳಿಸಲಿವೆ. ಆ ಮೆಸೇಜ್‌ ಈ ತರ ಇರುತ್ತೆ.

-masthmagaa.com

Contact Us for Advertisement

Leave a Reply