ಎಡಪಂಥೀಯ ಉಗ್ರವಾದ ನಿರ್ಮೂಲಗೊಳಿಸಬೇಕು: ಬುಡಕಟ್ಟು ಯುವ ಜನಾಂಗಕ್ಕೆ ಅಮಿತ್ ಶಾ‌ ಕರೆ

masthmagaa.com:

ದೆಹಲಿಯಲ್ಲಿ ನಡೆದ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬುಡಕಟ್ಟು ಜನಾಂಗದ ಯುವಕರೊಂದಿಗೆ ಇಂಟರ‍್ಯಾಕ್ಟ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು, Left Wing Extremism (LWE) ಅಂದ್ರೆ ಎಡಪಂಥೀಯ ಉಗ್ರವಾದವನ್ನ ದೇಶದಿಂದ ನಿರ್ಮೂಲಗೊಳಿಸಲು ಪ್ರಮುಖ ಪಾತ್ರವನ್ನ ವಹಿಸುವಂತೆ ಬುಡಕಟ್ಟು ಯುವ ಜನಾಂಗಕ್ಕೆ ತಿಳಿಸಿದ್ದಾರೆ. ಜೊತೆಗೆ ಬುಡಕಟ್ಟು ಯುವಜನಾಂಗ ತಪ್ಪು ಮಾರ್ಗ ತುಳಿಯಬಾರದು ಹಾಗೂ ಬೇರೆಯವರನ್ನ ತಪ್ಪು ಮಾರ್ಗದಲ್ಲಿ ಸಾಗಲು ಕೂಡ ಬಿಡಬಾರದು. ಭಾರತದ ಅಧ್ಯಕ್ಷರಾದ ದ್ರೌಪದಿ ಮುರ್ಮು ಅವರ ಎಕ್ಸಾಂಪಲ್‌ ನೀಡುತ್ತಾ, ಒಬ್ಬ ವ್ಯಕ್ತಿ ಎಲ್ಲಿ ಹುಟ್ಟಿದ್ದಾನೆ ಅನ್ನೋದು ಮುಖ್ಯವಲ್ಲ, ಬದಲಾಗಿ ಅವನ ಜೀವನದಲ್ಲಿ ಎಂಥ ಕೆಲಸವನ್ನ ಮಾಡಿದ್ದಾನೆ ಅನ್ನೋದು ಮುಖ್ಯವಾಗಿದೆ. ಈಗ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯನ್ನ ಕಾಣ್ತಾ ಇದೆ. ಎಲ್ಲಾ ಕ್ಷೇತ್ರದಲ್ಲೂ ಬುಡಕಟ್ಟು ಜನರಿಗೆ ಬಹಳಷ್ಟು ಅವಕಾಶವನ್ನ ನೀಡಲಾಗುತ್ತಿದೆ. ಅಂದ್ಹಾಗೆ ಪ್ರಧಾನಿ ನರೇಂದ್ರ ಮೋದಿಯವರು ನಿರ್ಧರಿಸಿದಂತೆ, ಬುಡಕಟ್ಟು ಸ್ವಾತಂತ್ರ ಹೋರಾಟಗಾರರ ನೆನಪಿನಲ್ಲಿ ದೇಶಾದ್ಯಂತ ಒಟ್ಟು 10 ಬುಡಕಟ್ಟು ಮ್ಯುಸಿಯಂಗಳನ್ನ ನಿರ್ಮಿಸಲಾಗುತ್ತೆ ಅಂತ ಅಮಿತ್‌ ಶಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply