ಕೆನಡಾ ಸಂಸತ್ತಿನಲ್ಲಿ ನಾಝಿ ಯೋಧನಿಗೆ ಗೌರವ! ಕ್ಷಮೆಯಾಚಿಸಿದ ಟ್ರುಡು!

masthmagaa.com:

ಖಲಿಸ್ತಾನಿಗಳ ವಿಚಾರವಾಗಿ ಭಾರತದ ಜೊತೆ ದ್ವೇಷ ಕಟ್ಟಿಕೊಂಡಿರೋ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಈಗ ಮತ್ತೊಂದು ವಿಚಾರದಲ್ಲಿ ಇಂಗು ತಿಂದ ನಂತರ ಕ್ಷಮೆಯಾಚಿಸಿದ್ದಾರೆ. ಕೆನಡಾದ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಹಿರಿಯ ನಾಝಿ ಯೋಧನನ್ನ ಗೌರವಿಸಿದ್ದಕ್ಕಾಗಿ ಟ್ರುಡು ತಮ್ಮ ಸಂಸತ್ತಿನ ಪರವಾಗಿ ಕ್ಷಮೆ ಕೇಳಿದ್ದಾರೆ. ನಮ್ಮ ನಡೆಯಿಂದ ಸಂಸತ್ತು ಮತ್ತು ಕೆನಡಾಕ್ಕೆ ತೀವ್ರ ಮುಜುಗರ ಉಂಟಾಗಿದೆ. ಸೆಪ್ಟೆಂಬರ್‌ 22ರಂದು ಈ ಸದನದಲ್ಲಿದ್ದ ನಾವೆಲ್ಲರೂ ಹಿಂದೆ ಮುಂದೆ ಯೋಚಿಸಿದೆ ನಿಂತು ಚಪ್ಪಾಳೆ ತಟ್ಟಿದ್ದೇವೆ. ಅದಕ್ಕಾಗಿ ತೀವ್ರವಾಗಿ ವಿಷಾದಿಸುತ್ತೇವೆ ಅಂತ ಟ್ರುಡು ಹೇಳಿದ್ದಾರೆ. ಜೊತೆಗೆ ನಾಝಿ ಯೋಧ ಹುಂಕಾ ಅವರನ್ನು ಗೌರವಿಸಿರುವುದು ಎರಡನೇ ವಿಶ್ವಯುದ್ಧದ ವೇಳೆ ನಡೆದ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಇದರಿಂದ ಯುಹೂದಿ ಸೇರಿದಂತೆ ಮಹಾಯುದ್ಧದಲ್ಲಿ ನಾಝಿ ಆಡಳಿತದಿಂದ ತತ್ತರಿಸಿದ ಅನೇಕರಿಗೆ ನೋವಾಗಿದೆ ಅಂತ ಟ್ರುಡು ವಿಷಾದ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಆ ವ್ಯಕ್ತಿಯನ್ನು ಆಹ್ವಾನಿಸಿ ಗೌರವಿಸಿದ್ದ ಕಾರಣಕ್ಕೆ ಕೆನಡಾ ಹೌಸ್‌ ಆಫ್‌ ಕಾಮನ್ಸ್‌ನ ಸ್ಪೀಕರ್ ಆಂಥೋನಿ ರೋಟಾ ಅವರು ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಈ ವಿಚಾರವಾಗಿ ರಿಯಾಕ್ಟ್‌ ಮಾಡಿರುವ ರಷ್ಯಾ, ಅಪರಾಧಿಗಳಿಗೆ ಶಿಕ್ಷೆ ಕೊಡುವ ಅಥ್ವಾ ಶಿಕ್ಷೆಕೊಡಲು ಇಚ್ಛಿಸುವವರಿಗೆ ಅಪರಾಧಿಯನ್ನ ಹಸ್ತಾಂತರ ಮಾಡೋದು ಕೆನಡಾ ಅಧಿಕಾರಿಗಳ ಕರ್ತವ್ಯ ಅಂತ ಹೇಳಿದೆ. ಇದೇ ವೇಳೆ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಒಬ್ಬ ಯಹೂದಿಯಾಗಿದ್ದು, ಹತ್ಯಾಕಾಂಡದಲ್ಲಿ ತಮ್ಮವರನ್ನ ಕಳೆದುಕೊಂಡಿದ್ದರೂ ನಾಝಿ ಎಲಿಮೆಂಟ್‌ನ್ನ ಆಶ್ರಯಿಸಿಕೊಂಡಿದೆ ಅಂತ ರಷ್ಯಾ ಆರೋಪಿಸಿದೆ.

-masthmagaa.com

Contact Us for Advertisement

Leave a Reply