ಜಪಾನ್‌ನಲ್ಲಿ ನೂತನ TSMC ಚಿಪ್‌ ತಯಾರಿಕಾ ಘಟಕ ಸ್ಥಾಪನೆ!

masthmagaa.com:

ತೈವಾನ್‌ನ ಪ್ರಮುಖ ಚಿಪ್‌ ಕಂಪನಿ TSMC, ಅಂದ್ರೆ ತೈವಾನ್‌ ಸೆಮಿಕಂಡಕ್ಟರ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪನಿ ಜಪಾನ್‌ನಲ್ಲಿ ತನ್ನ ನೂತನ ತಯಾರಿಕಾ ಘಟಕ ಸ್ಥಾಪಿಸಿದೆ. TSMC ಕಂಪನಿ ಜಗತ್ತಿನ ಅರ್ಧದಷ್ಟು ಚಿಪ್‌ಗಳನ್ನ ತಯಾರಿಸುತ್ತೆ. NVIDIA ಹಾಗೂ ಆಪಲ್‌ ಕಂಪನಿಗಳೂ TSMCಯಿಂದ ಸೆಮಿಕಂಡಕ್ಟರ್‌ ಖರೀದಿಸುತ್ವೆ. ಸ್ಮಾರ್ಟ್‌ಪೋನ್‌ನಿಂದ ಹಿಡಿದು ಸ್ಯಾಟಲೈಟ್‌ವರೆಗೆ, AI ಟೆಕ್ನಾಲಜಿಗೆ ಈ ಕಂಪನಿ ಶಕ್ತಿ ತುಂಬಿದೆ. ಡಿಫೆನ್ಸ್‌ನಲ್ಲೂ ಈ ಕಂಪನಿಯ ಚಿಪ್‌ಗಳು ಬಳಕೆಯಾಗುತ್ವೆ. ಆದ್ರೆ ತೈವಾನ್‌ನಲ್ಲಿ ಚೀನಾ ಆಗಾಗ ಮೂಗು ತೂರಿಸೋದ್ರಿಂದ ಈ ಕಂಪನಿಯ ಕಸ್ಟಮರ್‌ಗಳು ವಿದೇಶಗಳಲ್ಲಿ ಹೆಚ್ಚಿನ ಪ್ರೊಡಕ್ಚನ್‌ ಸ್ಟಾರ್ಟ್‌ ಮಾಡಿ ಅನ್ನೋ ಬೇಡಿಕೆ ಇಟ್ಟಿದ್ರು. ಅದರಂತೆ ಈಗ ಜಪಾನ್‌ನ ಕ್ಯೂಶು ದ್ವೀಪದಲ್ಲಿ TSMC ತನ್ನ ನೂತನ ಘಟಕವನ್ನ ಸ್ಥಾಪಿಸಿದೆ. ಈ ಕಂಪನಿಯ ಫೌಂಡರ್‌ 92 ವರ್ಷದ ಮೋರಿಸ್‌ ಚಾಂಗ್‌ ಈ ಘಟಕವನ್ನ ಉದ್ಘಾಟನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply