ಬೆಂಗಳೂರು: ವಿವಿ ಆವರಣದಲ್ಲಿ ದೇವಸ್ಥಾನ ಬೇಡ.. ಲೈಬ್ರೇರಿ ಬೇಕು!

masthmagaa.com:

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ದೇಗುಲ ನಿರ್ಮಾಣ ಬೇಡ, ಗ್ರಂಥಾಲಯವನ್ನ ನಿರ್ಮಿಸಿ ಅಂತ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಈ ಹಿಂದೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸರಸ್ವತಿ ವಿಗ್ರಹಕ್ಕೆ ಗಲಾಟೆ ನಡೆದಿತ್ತು. ಇದೀಗ ಗಣೇಶ ದೇವಸ್ಥಾನ ನಿರ್ಮಾಣಕ್ಕೆ ಗಲಾಟೆ ಪ್ರಾರಂಭವಾಗಿದೆ. ಕೆಂಗೇರಿ ಹೊರ ವರ್ತುಲ ರಸ್ತೆಯ ಅಗಲೀಕರಣದ ಹಿನ್ನಲೆ ವಿವಿಯ ಗೇಟ್‌ ಬಳಿ ಇದ್ದ ಗಣೇಶ ದೇವಸ್ಥಾನವನ್ನ ವಿವಿ ಆವರಣಕ್ಕೆ ಸ್ಥಳಾಂತರಿಸಲು ವಿವಿ ಈ ಹಿಂದೆಯೇ ಪಾಲಿಕೆ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ವಿವಿ ಆವರಣದಲ್ಲಿ ದೇವಸ್ಥಾನವನ್ನ ಕಟ್ಟಲು ಅಡಿಪಾಯವನ್ನೂ ಹಾಕಲಾಗಿತ್ತು. ಆದ್ರೆ ವಿದ್ಯಾರ್ಥಿಗಳು ವಿವಿ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡ್ಬಾರ್ದು. ಇದರ ಬದಲು ಗ್ರಂಥಾಲಯ ನಿರ್ಮಾಣ ಮಾಡ್ಬೇಕು. ಅನಾವಶ್ಯಕವಾಗಿ ವಿವಿಯ ಜಾಗ ಹಾಳು ಮಾಡಲಾಗುತ್ತಿದೆ ಅಂತ ಪ್ರತಿಭಟನೆ ಆರಂಭಿಸಿದ್ರು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದ್ರು. ಇನ್ನು ಈ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಎಸ್‌ ಎಂ ಜಯಕರ ಶೆಟ್ಟಿ ದೇವಸ್ಥಾನ ನಿರ್ಮಾಣ ಕಾರ್ಯ ನಾನು ಅಧಿಕಾರ ವಹಿಸಿಕೊಂಡ ಮೇಲೆ ತೆಗೆದುಕೊಂಡ ನಿರ್ಧಾರ ಅಲ್ಲ. ಈ ಹಿಂದೆಯೇ ತೆಗೆದುಕೊಂಡಾಗಿತ್ತು. ಇದೀಗ ನಿರ್ಮಾಣ ಕಾರ್ಯ ಆರಂಭವಾಗಿದೆ. ದೇವಸ್ಥಾನದ ವಿಷಯದಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡೋದು ತಪ್ಪು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply