ನ್ಯಾಟೊ ಸೇರೋಕೆ ಫಿನ್‌ಲ್ಯಾಂಡ್‌ಗೆ ಅನುಮತಿ ಕೊಡ್ತೇವೆ ಅದರೆ ಸ್ವಿಡನ್‌ಗೆ ಕೊಡಲ್ಲ: ಟರ್ಕಿ ಅಧ್ಯಕ್ಷ

masthmagaa.com:

ನ್ಯಾಟೊ ಸೇರೋಕೆ ಇಚ್ಛಿಸಿರೋ ಫಿನ್‌ಲ್ಯಾಂಡ್‌ ಮತ್ತು ಸ್ವಿಡನ್‌ಗೆ ಟರ್ಕಿ ಅಡ್ಡಗಾಲು ಹಾಕ್ತಾನೆ ಬಂದಿದೆ. ಇದೀಗ ಫಿನ್‌ಲ್ಯಾಂಡ್‌ ನ್ಯಾಟೊ ಸೇರೋಕೆ ಟರ್ಕಿ ಅನುಮತಿ ಕೊಡುತ್ತೆ ಆದ್ರೆ ಸ್ವಿಡನ್‌ಗೆ ಕೊಡೋದಿಲ್ಲ ಅಂತ ಟರ್ಕಿ ಅಧ್ಯಕ್ಷ ತಾಯಿಪ್ ಎರ್ಡೋಆನ್‌ ಹೇಳಿದ್ದಾರೆ. ಜೊತೆಗೆ ಅಗತ್ಯವಿದ್ದರೆ ನಾವು ಫಿನ್‌ಲ್ಯಾಂಡ್‌ಗೆ ಸಂಬಂಧಪಟ್ಟಂತೆ ವಿಭಿನ್ನ ಪ್ರತಿಕ್ರಿಯೆಯನ್ನ ನೀಡ್ಬೋದು. ನಾವು ಈ ರೀತಿ ಮಾಡಿದಾಗ ಸ್ವಿಡನ್‌ ಶಾಕ್‌ ಆಗ್ಬೋದು ಅಂತ ಎರ್ಡೋಆನ್‌ ಹೇಳಿದ್ದಾರೆ. ಅಷ್ಟೆ ಅಲ್ದೆ ಟರ್ಕಿ ಹುಡುಕ್ತಿರೋ ಶಂಕಿತ ಖುರ್ದಿಶ್‌ ಉಗ್ರರನ್ನ ಹಸ್ತಾಂತರ ಮಾಡುವಂತೆ ಸ್ವಿಡನ್‌ ಮುಂದೆ ಇಟ್ಟಿರೋ ತಮ್ಮ ಡಿಮ್ಯಾಂಡ್‌ ಅನ್ನ ರಿಪೀಟ್‌ ಮಾಡಿದ್ದಾರೆ. ನೀವು ಸಂಪೂರ್ಣವಾಗಿ ನ್ಯಾಟೊ ಸೇರ್ಬೇಕು ಅಂತ ಬಯಸಿದ್ದೇ ಆದ್ರೆ ನಮಗೆ ಈ ಉಗ್ರರನ್ನ ಹಸ್ತಾಂತರ ಮಾಡ್ತೀರ ಅಂತ ಸ್ವಿಡನ್‌ಗೆ ಎರ್ಡೋಆನ್‌ ಸಂದೇಶ ನೀಡಿದ್ದಾರೆ.

-masthmagaa.com

Contact Us for Advertisement

Leave a Reply