ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ನ್ಯಾಟೋಗೆ? ಹೊಸ ಡಿಮ್ಯಾಂಡ್‌ ಮಾಡಿದ ಟರ್ಕಿ!

masthmagaa.com:

ರಷ್ಯಾ ಭಯದಿಂದ ನ್ಯಾಟೋ ಸೇರೋಕೆ ಮುಂದಾಗಿರೋ ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ಬೇಡಿಕೆಗೆ ಟರ್ಕಿ ಪ್ರತಿಕ್ರಿಯೆ ನೀಡಿದೆ. ಟರ್ಕಿ ವಿದೇಶಾಂಗ ಸಚಿವ ಮೆವ್ಲುಟ್‌ ಕಾವುಸೊಗ್ಲು ಮಾತನಾಡಿದ್ದು, ಎರಡು ದೇಶಗಳ ನ್ಯಾಟೋ ಸದಸ್ಯತ್ವಕ್ಕೆ ಒಪ್ಪಿಗೆ ನೀಡೋಕೆ ಕೆಲವು ಬೇಡಿಕೆಗಳನ್ನ ಇಟ್ಟಿದ್ದಾರೆ. ಅದ್ರಲ್ಲಿ ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ತಮ್‌ ತಮ್ಮ ದೇಶಗಳಲ್ಲಿ ಭಯೋತ್ಪಾದಕರನ್ನ ಬೆಂಬಲಿಸೋದನ್ನ ನಿಲ್ಲಿಸ್ಬೇಕು, ಸ್ಪಷ್ಟ ಭದ್ರತಾ ಖಾತರಿ ನೀಡ್ಬೇಕು ಹಾಗೂ ಟರ್ಕಿ ಮೇಲಿರೋ ರಫ್ತು ನಿಷೇಧವನ್ನ ತೆಗೆದು ಹಾಕ್ಬೇಕು ಅಂತ ಆಗ್ರಹಿಸಿದ್ದಾರೆ. ಈ ವೇಳೆ ಯುರೋಪಿನ ರಾಷ್ಟ್ರಗಳಿಗೆ ಮುಕ್ತವಾಗಿರೊ ಮೈತ್ರಿ ನೀತಿಗೆ ಸೇರಲು ಬಯಸೋರನ್ನ ಟರ್ಕಿ ಯಾವುದೇ ಕಾರಣಕ್ಕೂ ವಿರೋಧಿಸಲ್ಲ ಅಂತಾ ಹೇಳಿದ್ದಾರೆ. ಅಂದ್ಹಾಗೆ ನ್ಯಾಟೋ ಯಾವುದೇ ನಿರ್ಧಾರ ತೆಗ್ದುಕೊಳ್ಳಬೇಕಂದ್ರೆ ಅದರ ಎಲ್ಲ 30 ಸದಸ್ಯ ರಾಷ್ಟ್ರಗಳು ಒಪ್ಪಿಗೆ ಸೂಚಿಸ್ಬೇಕು. ಇನ್ನು ಟರ್ಕಿ ಭಯೋತ್ಪಾದಕ ಗುಂಪು ಅಂತ ಪರಿಗಣಿಸೋ ಕುರ್ದಿಷ್‌ ಗುಂಪನ್ನ ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ಬೆಂಬಲಿಸುತ್ತೆ. ಈ ಕಾರಣಕ್ಕಾಗಿ ಅವ್ರ ನ್ಯಾಟೋ ಸದಸ್ಯತ್ವಕ್ಕೆ ಟರ್ಕಿ ವಿರೋಧ ವ್ಯಕ್ತಪಡಿಸ್ತಾನೇ ಇದೆ.

-masthmagaa.com

Contact Us for Advertisement

Leave a Reply