ರಷ್ಯಾ ಅಧ್ಯಕ್ಷ ಪುಟಿನ್‌ ಇಂದು ಇರಾನ್‌ ಪ್ರವಾಸ: ನ್ಯಾಟೋ ಸೇರೋ ನಾರ್ಡಿಕ್‌ ದೇಶಗಳಿಗೆ ಟರ್ಕಿ ಮತ್ತೆ ವಾರ್ನ್!

masthmagaa.com:

ನಾವು ನ್ಯಾಟೋ ಸೇರೋದು ಪಕ್ಕಾ ಅಂತ ಸಮಾಧಾನ ಆಗ್ತಿರೋ ಸ್ವೀಡನ್‌ ಹಾಗೂ ಫಿನ್ ಲ್ಯಾಂಡ್‌ಗಳಿಗೆ ಟರ್ಕಿ ಮತ್ತೆ ವಾರ್ನ್‌ ಮಾಡಿದೆ. ಈ ಬಗ್ಗೆ ಮಾತನಾಡಿರೋ ಟರ್ಕಿ ಅಧ್ಯಕ್ಷ ರೀಸಿಪ್‌ ತಾಯಿಪ್‌ ಎರ್ಡೋಗನ್‌ ನಾವು ಮತ್ತೆ ಮತ್ತೆ ಹೇಳ್ತಿದ್ದೀವಿ. ನಾವು ಫಿನ್ ಲ್ಯಾಂಡ್‌ ಹಾಗೂ ಸ್ವೀಡನಗಳನ್ನ ನ್ಯಾಟೋ ಸೇರೋ ಪ್ರಕ್ರಿಯೆಯಿಂದ ತಡೆ ಹಿಡಿಬೋದು. ಟರ್ಕಿಯ ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳದಿದ್ರೆ ನಾವು ಖಂಡಿತಾ ಅದನ್ನ ಮಾಡ್ತೀವಿ ಅಂತ ಅಬ್ಬರಿಸಿದ್ದಾರೆ. ಅಂದ್ಹಾಗೆ ಟರ್ಕಿ ಟೆರರಿಸ್ಟ್‌ ಅಂತ ಪರಿಗಣಿಸಿರೋ ಕುರ್ದಿಶ್‌ ಪಡೆಗಳಿಗೆ ಈ ನಾರ್ಡಿಕ್‌ ದೇಶಗಳು ನೆಲೆ ನೀಡಿವೆ ಅನ್ನೋದು ಟರ್ಕಿಯ ಆರೋಪ. ಅದರಿಂದಲೇ ನಾವು ನಿಮ್ಮನ್ನ ನ್ಯಾಟೋ ಸೇರೋಕೆ ಬಿಡಲ್ಲ ಅಂತ ಆರಂಭದಿಂದಲೂ ಹೇಳ್ಕೊಂಡು ಬಂದಿತ್ತು ಟರ್ಕಿ. ಆದ್ರೆ ಅಮೆರಿಕ ಮತ್ತು ಮಿತ್ರರು ಟರ್ಕಿಯ ಮನವೊಲಿಸಿದ ಮೇಲೆ ಈ ಎರಡೂ ದೇಶಗಳಿಗೆ ಕೆಲ ಕಂಡಿಷನ್‌ಗಳ ಹಾಕಿ ಆಯ್ತು ಸೇರಿ ಅಂತ ಒಪ್ಪಿಕೊಂಡಿತ್ತು. ಆದ್ರೆ ಈಗ ಮತ್ತೆ ಅದೇ ರಾಗ ಹಾಡ್ತಿರೋ ಟರ್ಕಿ ಅಧ್ಯಕ್ಷ ನಾವು ನಿಮ್ಮನ್ನ ಮತ್ತೆ ತಡೀಬೋದು ಅಂತ ಬೆದರಿಸಿದ್ದಾರೆ. ಅಂದಹಾಗೆ ಸಿರಿಯಾ ಬಿಕ್ಕಟ್ಟಿನ ಕುರಿತು ರಷ್ಯಾ ಟರ್ಕಿ ಹಾಗೂ ಇರಾನ್‌ ದೇಶಗಳು ಇಂದು ಇರಾನ್‌ ರಾಜಧಾನಿ ತೆಹ್ರಾನ್‌ನಲ್ಲಿ ಮಾತುಕತೆ ನಡೆಸಲಿವೆ. ಇದಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಕೂಡ ಬರ್ತಿದ್ದಾರೆ. ಇದಕ್ಕೂ ಮುಂಚೆಯೇ ಟರ್ಕಿ ಈ ರೀತಿ ಹೇಳಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-masthmaga.com

Contact Us for Advertisement

Leave a Reply