ಗ್ರೀಕ್‌ ಪ್ರಧಾನಿ ನನ್ನ ಪಾಲಿಗೆ ಇಲ್ಲ ಅಂತ ಟರ್ಕಿ ಅಧ್ಯಕ್ಷ ಹೇಳಿದ್ಯಾಕೆ?

masthmagaa.com:

ಅಮೆರಿಕ ಟರ್ಕಿಗೆ F-16 ಫೈಟರ್‌ ಜೆಟ್‌ಗಳನ್ನ ನೀಡ್ತಾ ಇತ್ತು ಆದ್ರೆ ಗ್ರೀಸ್‌ ಇದಕ್ಕೆ ಅಡ್ಡಗಾಲು ಹಾಕಿದೆ. ಅಮೆರಿಕ ಜೊತೆಗಿನ ಭೇಟಿಯಲ್ಲಿ ಫೈಟರ್‌ ಜೆಟ್‌ಗಳನ್ನ ಟರ್ಕಿಗೆ ನೀಡಬಾರ್ದು ಅಂತ ಗ್ರೀಕ್‌ ಪ್ರಧಾನಿ ಕಿರಿಯಾಕೋಸ್‌ ಮಿಸೊಟಾಕಿಸ್‌ ಹೇಳಿದ್ದಾರೆ. ಹೀಗಾಗಿ ಇನ್ಮೇಲೆ ನಾನು ಗ್ರೀಕ್‌ ಪ್ರಧಾನಿ ಹತ್ರ ಮಾತಾಡಲ್ಲ. ಅವ್ರು ನನ್ನ ಪಾಲಿಗೆ ಇಲ್ಲ ಅಂತ ಟರ್ಕಿ ಅಧ್ಯಕ್ಷ ರೆಜೆಪ್‌ ತಾಯಿಪ್‌ ಎರ್ಡೋಹಾನ್‌ ಹೇಳಿದ್ದಾರೆ. ಜೊತೆಗೆ ನಮ್ಮ ವಿವಾದಗಳ ಮಧ್ಯೆ ಮೂರನೇ ದೇಶವನ್ನ ತರಬಾರ್ದು ಅಂತ ಉಭಯದೇಶಗಳ ನಡುವೆ ಒಪ್ಪಿಗೆಯಾಗಿತ್ತು. ಆದರೂ ಗ್ರೀಸ್‌ ಈ ರೀತಿ ಮಾಡಿದೆ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply