ಸ್ವೀಡನ್‌ ನ್ಯಾಟೋ ಸದಸ್ಯತ್ವಕ್ಕೆ ಕೊನೆಗೂ ಒಪ್ಪಿಗೆ ನೀಡಿದ ಟರ್ಕಿ!

masthmagaa.com:

ನ್ಯಾಟೋ ಸದಸ್ಯತ್ವ ಪಡೀಬೇಕೆಂಬ ಸ್ವೀಡನ್‌ ಆಸೆಗೆ ಇದೀಗ ಟರ್ಕಿ ಕೊನೆಗೋ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಬರೋಬ್ಬರಿ 20 ತಿಂಗಳ ನಂತ್ರ ಜನವರಿ 23 ರಂದು ಟರ್ಕಿ ಪಾರ್ಲಿಮೆಂಟ್‌, ಸ್ವೀಡನ್‌ನ ನ್ಯಾಟೋ ಸದಸ್ಯತ್ವ ಅಂಗೀಕರಿಸಿದೆ. ಅಂದ್ಹಾಗೆ ಸ್ವೀಡನ್‌ 2022ರಲ್ಲಿ ನ್ಯಾಟೋ ಸೇರ್ಕೊಳ್ಳೋಕೆ ಮುಂದೆ ಬಂದಿತ್ತು. ಆಗ ನ್ಯಾಟೋದ ಎಲ್ಲಾ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ರೂ, ಟರ್ಕಿ ಮತ್ತು ಹಂಗರಿ ಮಾತ್ರ ನಿರಾಕರಿಸಿತ್ತು. ಆದ್ರೆ ಇದೀಗ ಸ್ವೀಡನ್‌ನ ನ್ಯಾಟೋ ಸದಸ್ಯತ್ವಕ್ಕೆ ಟರ್ಕಿ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಕೇವಲ ಹಂಗರಿ ಗ್ರೀನ್‌ ಸಿಗ್ನಲ್‌ ನೀಡೋದು ಬಾಕಿ ಉಳಿದಿದೆ.

-masthmagaa.com

Contact Us for Advertisement

Leave a Reply