ಇಸ್ರೇಲ್​ನಿಂದ ಶಸ್ತ್ರಸಜ್ಜಿತ ಡ್ರೋನ್​ ಖರೀದಿಗೆ ಜರ್ಮನಿ ತಯಾರಿ!

masthmagaa.com:

ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣದಿಂದ ಪತರಗುಟ್ಟಿರೋ ವಿವಿಧ ದೇಶಗಳು ದಾಳಿಯಾದ ದಿನದಿಂದ ಇವತ್ತಿನವರೆಗೂ ತಮ್ಮ ತಮ್ಮ ಸೇನಾ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ತಾಯಿವೆ. ಅದ್ರಲ್ಲೂ ರಷ್ಯಾ ಸಮೀಪದಲ್ಲಿರೋ ಯುರೋಪಿನ ರಾಷ್ಟ್ರಗಳು ಅನ್ಬೋದು. ಇತ್ತೀಚೆಗಷ್ಟೇ ತನ್ನ ಸೇನಾ ಬಜೆಟ್‌ ಅನ್ನ ಡಬಲ್‌ ಮಾಡೋದಾಗಿ ಹೇಳಿದ್ದ ಜರ್ಮನಿ, ಇದೇ ಮೊದಲ ಬಾರಿಗೆ ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಡ್ರೋನ್​ಗಳ ಖರೀದಿಗೆ ಪ್ಲಾನ್ ಮಾಡ್ತಿದೆ. ಇದಕ್ಕೆ ಸುಮಾರು 16 ಕೋಟಿ ಡಾಲರ್‌ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 1,200 ಕೋಟಿಗೂ ಹೆಚ್ಚು ರೂಪಾಯಿಯ ಒಪ್ಪಂದಕ್ಕೆ ಇಸ್ರೇಲ್‌ ಜೊತೆಗೆ ಸಹಿ ಹಾಕಲಿದೆ ಅಂತ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಅಂದ್ಹಾಗೆ ಯೂರೋಪಿನ ಪ್ರಮುಖ ದೇಶವಾಗಿರೋ ಜರ್ಮನಿ ಬಳಿ ದಾಳಿ ನಡೆಸುವ ಡ್ರೋನ್‌ ಇಲ್ಲ ಅನ್ನೋದೇ ಸೋಜಿಗ.

-masthmagaa.com

Contact Us for Advertisement

Leave a Reply