ಕೇಂದ್ರ ಸರ್ಕಾರದ ಹೊಸ ಬ್ರಾಡ್‌ಕಾಸ್ಟಿಂಗ್‌ ರೆಗುಲೇಶನ್‌ ಬಿಲ್!

masthmagaa.com:

ಕೇಂದ್ರ ಸರ್ಕಾರದ ಬಿಲ್‌ ಒಂದು ಟಿವಿ ಹಾಗೂ ಸ್ಟ್ರೀಮಿಂಗ್‌ ಇಂಡಸ್ಟ್ರಿಗೆ ತಲೆ ಬಿಸಿ ತಂದಿದೆ. ಬ್ರಾಡ್‌ಕ್ಯಾಸ್ಟಿಂಗ್‌ ಸರ್ವೀಸಸ್(ರೆಗುಲೇಷನ್)‌ ಬಿಲ್‌ ಮೂಲಕ, ಸರ್ಕಾರ ಒಟಿಟಿ ಹಾಗೂ ಡಿಜಿಟಲ್‌ ನ್ಯೂಸ್‌ಗಳಂತ ಬ್ರಾಡ್‌ಕ್ಯಾಸ್ಟಿಂಗ್‌ ಸೇವೆಗಳ ಮೇಲೆ ನಿಯಂತ್ರಣ ಹೇರೋಕೆ ಮುಂದಾಗಿದೆ. ಜನವರಿ 27ರವರೆಗೆ ಈ ಕಾಯ್ದೆ ವಿಚಾರವಾಗಿ ಸಲಹೆಗಳನ್ನ ಸರ್ಕಾರ ಪಡೆಯಲಿದೆ. ಲೋಕಸಭೆ ಚುನಾವಣೆ ಮುಗಿದ್ಮೇಲೆ ಕಾಯ್ದೆ ರೂಪುಗೊಳ್ಳೋ ಸಾಧ್ಯತೆ ಇದೆ. ಸದ್ಯ ಚಾಲ್ತಿಯಲ್ಲಿರೋ 1995ರ ಕೇಬಲ್‌ ಟೆಲಿವಿಶನ್‌ ನೆಟ್‌ವರ್ಕ್ಸ್‌ ಬಿಲ್ಲನ್ನ ಇದು ರೀಪ್ಲೇಸ್‌ ಮಾಡಲಿದೆ. ಟಿವಿ ಹಾಗೂ OTT ಎರಡನ್ನೂ ಒಂದೇ ಫ್ರೇಮ್‌ವರ್ಕ್‌ನಲ್ಲಿ ಮರ್ಜ್‌ ಮಾಡೋ ಬಗ್ಗೆ ಸರ್ಕಾರ ಯೋಜಿಸಿದೆ. ಸೋ ಟಿವಿಗೆ ಅಪ್ಲೈ ಹಾಗೋ ರೂಲ್ಸ್‌ಗಳು ಒಟಿಟಿಗೂ ಅಪ್ಲೈ ಆಗ್ಬೋದು ಅಂತ ಕಳವಳ ವ್ಯಕ್ತವಾಗಿದೆ. ಅಲ್ಲದೆ ಈ ಕಾಯ್ದೆ ಅಡಿಯಲ್ಲಿ ಒಂದು ಕಂಟೆಂಟ್‌ ಎವಾಲ್ಯುಯೇಷನ್‌ ಕಮಿಟಿ ಕೂಡ ಸ್ಥಾಪನೆ ಆಗೋ ಸಾಧ್ಯತೆ ಇದೆ. ಸೆನ್ಸಾರ್‌ ಬೋರ್ಡ್‌ ತರ.. ಇದು ಟಿವಿ ಹಾಗೂ ಸ್ಟ್ರೀಮಿಂಗ್‌ ಇಂಡಸ್ಟ್ರಿಗೆ ತಲೆ ಬಿಸಿ ತಂದಿದೆ.

-masthmagaa.com

Contact Us for Advertisement

Leave a Reply