ಇರಾನ್‌ ಸರಣಿ ಉಗ್ರ ದಾಳಿ! ಅಮೆರಿಕ ಮತ್ತು ಇಸ್ರೇಲ್‌ ಕೈವಾಡ?

masthmagaa.com:

ಇರಾನ್‌ನ ಕೆರ್ಮನ್‌ನಲ್ಲಿ ಜನವರಿ 3 ರಂದು ನಡೆದ ಸರಣಿ ಸ್ಪೋಟದಲ್ಲಿ ಕನಿಷ್ಠ 103 ಜನರು ಸಾವನ್ನಪ್ಪಿದ್ದಾರೆ. ಹಾಗೂ 188 ಜನರು ಗಾಯಗೊಂಡಿದ್ದಾರೆ ಅಂತ ವರದಿಯಾಗಿದೆ. ಈ ಸ್ಫೋಟಕ್ಕೆ ಇಸ್ರೇಲ್‌ ಮತ್ತು ಅಮೆರಿಕ ಕಾರಣ ಅಂತ ಇದೀಗ ಇರಾನ್‌ ಡೈರೆಕ್ಟ್‌ ಆಗಿ ಆರೋಪಿಸಿದೆ. ʻಈ ದಾಳಿಯಲ್ಲಿ ಅಮೆರಿಕ ಮತ್ತು ಇಸ್ರೇಲ್‌ ತಮ್ಮದೇನೂ ಕೈವಾಡವಿಲ್ಲ ಅಂತ ಹೇಳ್ತಿವೆ. ನಿಜವಾಗ್ಲೂ ಹೌದಾ? ನರಿ ಯಾವಾಗ್ಲೂ ತಾನಿರೋ ಜಾಗವನ್ನ ಮೊದಲು ಮೂಸಿ ನೋಡುತ್ತೆʼ ಅಂದಿದ್ದಾರೆ. ಅಂದ್ರೆ ಅಮೆರಿಕ ಇರಾನ್‌ನಲ್ಲಿ ತನ್ನ ನರಿ ಬುದ್ಧಿ ತೋರಿಸೋಕೆ ಶುರು ಮಾಡಿದೆ. ಇದ್ರಲ್ಲಿ ಯಾವ್ದೇ ಡೌಟ್‌ ಇಲ್ಲʼ ಅಂತ ಇರಾನ್‌ ಅಧ್ಯಕ್ಷರ ರಾಜಕೀಯ ಉಪನಾಯಕ ಮೊಹಮ್ಮದ್‌ ಜಮ್ಶಿದಿ ಜನವರಿ 4 ರಂದು ನೇರಾನೇರ ಆರೋಪಿಸಿದ್ದಾರೆ. ಇವ್ರ ಹೇಳಿಕೆಗೂ ಮುನ್ನ ತಮ್ಮ ಮೇಲಿನ ಈ ರೀತಿಯ ಆರೋಪಗಳನ್ನ ಅಮೆರಿಕ ರಿಜೆಕ್ಟ್‌ ಮಾಡಿತ್ತು. ʻಅಮೆರಿಕ ಈ ದಾಳಿಯಲ್ಲಿ ಇನ್ವಾಲ್ವ್‌ ಆಗೇ ಇಲ್ಲ. ಇನ್ನು ಇಸ್ರೇಲ್‌ ಈ ದಾಳಿಯಲ್ಲಿ ಸೇರ್ಕೊಂಡಿದೆ ಅಂದ್ರೆ ನಾವು ನಂಬಲ್ಲ. ನಾವು ಸಂಪೂರ್ಣವಾಗಿ ಹಮಾಸ್‌ ಜೊತೆಗಿನ ಯುದ್ಧದಲ್ಲಿ ಫೋಕಸ್ಡ್‌ ಆಗಿದ್ದೇವೆʼ ಅಂತ ಅಮೆರಿಕ ಹೇಳಿಕೆ ನೀಡಿತ್ತು. ಇನ್ನು ಈ ಸರಣಿ ದಾಳಿ ಬಗ್ಗೆ ಇರಾನ್‌ನ ಸುಪ್ರೀಂ ಲೀಡರ್‌ ಅಯತೊಲ್ಲಾ ಅಲಿ ಖಮೇನಿ ಕೂಡ ರಿಯಾಕ್ಟ್‌ ಮಾಡಿದ್ದಾರೆ. ʻಇರಾನ್‌ಗೆ ಕೆಡುಕು ಉಂಟು ಮಾಡಿದ ನಮ್ಮ ಶತ್ರುಗಳನ್ನ ಸುಮ್ನೆ ಬಿಡಲ್ಲ. ಅವ್ರಿಗೆ ತಕ್ಕ ಪಾಠ ಕಲಿಸ್ತೀವಿ, ಕಠೋರವಾಗಿ ಉತ್ತರಸ್ತೀವಿʼ ಅಂತ ಹೇಳಿದ್ದಾರೆ. ಇನ್ನು ಈ ಸರಣಿ ದಾಳಿ ಬಗ್ಗೆ ಇದೀಗ ಭಾರತ ಕೂಡ ವಿರೋಧ ವ್ಯಕ್ತಪಡಿಸಿದೆ. ʻಇರಾನ್‌ನ ಕೆರ್ಮನ್‌ನಲ್ಲಿ ನಡೆದ ಸರಣಿ ಸ್ಫೋಟದ ವಿಚಾರ ತಿಳಿದು ತುಂಬಾ ಶಾಕ್‌ ಆಗಿದೆ. ಇಂಥ ಕಷ್ಟದ ಟೈಮ್‌ನಲ್ಲಿ ನಾವು ಇರಾನ್‌ ಸರ್ಕಾರ ಮತ್ತು ಅಲ್ಲಿನ ಜನರ ಜೊತೆಗಿದ್ದೀವಿ. ಈ ದಾಳಿಯಲ್ಲಿ ಪ್ರಾಣ ಕಳೆದ್ಕೊಂಡವ್ರ ಮತ್ತು ಗಾಯಗೊಂಡವ್ರ ಫ್ಯಾಮಿಲಿಗಾಗಿ ದೇವ್ರಲ್ಲಿ ಪ್ರಾರ್ಥಿಸ್ತೀವಿʼ ಅಂತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply