ಇನ್ಮುಂದೆ ʻXʼನಲ್ಲಿ ಇರೋದಿಲ್ಲ ಈ ಫೀಚರ್‌! ಏನದು?

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವ್ರು ಟ್ವಿಟರ್‌ ಖರೀದಿ ಮಾಡಿದ್ಮೇಲೆ ಲೋಗೋ ಹಾಗೂ ಹೆಸರು ಸೇರಿದಂತೆ ಸಾಕಷ್ಟು ಬದಲಾವಣೆ ಮಾಡಿ ಸಖತ್‌ ಸುದ್ಧಿ ಮಾಡ್ತಿದ್ದಾರೆ. ಇದೀಗ X ಪ್ಲಾಟ್‌ಫಾರ್ಮ್‌ನಲ್ಲಿ ಬ್ಲಾಕಿಂಗ್‌ ಆಪ್ಶನ್‌ ರಿಮೂವ್‌ ಮಾಡೋದಾಗಿ ಅನೌನ್ಸ್‌ ಮಾಡಿದ್ದಾರೆ. ಇದಕ್ಕೆ ಬಳಕೆದಾರರೊಬ್ರು ಬ್ಲಾಕಿಂಗ್‌ ಆಪ್ಶನ್‌ ತೆಗೆದು ಹಾಕಿದ್ರೆ ಬಳಕೆದಾರರ ಪ್ರೈವಸಿಗೆ ತೊಂದ್ರೆಯಾಗ್ಬೋದು ಅಂತ ಪೋಸ್ಟ್‌ ಹಾಕಿದ್ದು, ನಿರ್ಧಾರವನ್ನ ವಾಪಾಸ್‌ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಪೋಸ್ಟ್‌ಗೆ ರಿಪ್ಲೈ ಮಾಡಿರುವ X ಸಿಇಒ ಲಿಂಡಾ ಯಕಾರಿನೋ, ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಸುರಕ್ಷತೆಯೇ ನಮಗೆ ಮೊದಲ ಅದ್ಯತೆ. ಹೀಗಾಗಿ ಬ್ಲಾಕ್‌ ಹಾಗೂ ಮ್ಯೂಟ್‌ಗಿಂತಲೂ ಹೆಚ್ಚು ಪರಿಣಾಮಕಾರಿ ಫೀಚರ್‌ನ್ನ ಇಂಟ್ರಡ್ಯೂಸ್‌ ಮಾಡೋಕೆ ಕೆಲಸ ಮಾಡ್ತಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply