ಸಕ್ಕರೆ ನಗರ ಮಂಡ್ಯದಲ್ಲಿ ಹೆಣ್ಣು ಭ್ರೂಣಹತ್ಯೆ ಜಾಲ ಬಯಲು!

masthmagaa.com:

ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ(Feticide) ಜಾಲ ಪತ್ತೆಯಾಗಿ ರಾಜ್ಯವನ್ನೇ ತಳ್ಳಣಗೊಳಿಸಿದೆ. ಪ್ರಕರಣದಲ್ಲಿ ಇಬ್ಬರು ವೈದ್ಯರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ ಅಂತ ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಹೇಳಿದ್ದಾರೆ. ಮೈಸೂರು, ಮಂಡ್ಯ ಪ್ರದೇಶದಲ್ಲಿ ಈ ಜಾಲ ಕಳೆದ 3 ತಿಂಗಳಲ್ಲಿ 242 ಭ್ರೂಣಗಳ ಹತ್ಯೆ ಮಾಡಿದ್ದು, ಕಳೆದ 2 ವರ್ಷಗಳಿಂದ ಈ ಕೃತ್ಯ ನಡೆಸುತ್ತಿದ್ದುದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಭ್ರೂಣ ಲಿಂಗ ಪತ್ತೆ ಮಾಡೋದೆ ಅಪರಾಧ. ಆದ್ರೆ ಈ ಪಾಪಿಗಳು ಕಳೆದ 2-3 ವರ್ಷಗಳಿಂದ 3 ಸಾವಿರ ಭ್ರೂಣಗಳನ್ನು ಹತ್ಯೆ ಮಾಡಿರ್ಬೋದು ಅಂತ ಪೊಲೀಸರು ಶಂಕಿಸಿದ್ದಾರೆ. ಹೊನ್ನಾಳಿ ಮೂಲದ ವೀರೇಶ್‌ ಹಾಗೂ ಸಿದ್ದೇಶ್‌ ಈ ದಂಧೆಯ ಕಿಂಗ್‌ಪಿನ್‌ಗಳಾಗಿದ್ದು, ಈ ಹಿಂದೆ ಕಿಡ್ನಾಪ್‌ ಕೇಸ್‌ನಲ್ಲಿ ಅರೆಸ್ಟ್‌ ಆಗಿದ್ರು ಅಂತ ತಿಳಿದು ಬಂದಿದೆ. ಅಂದ್ಹಾಗೆ ಆರೋಪಿಗಳ ಬಳಿ ಎರಡು ಅಲ್ಟ್ರಾ ಸೌಂಡ್‌ ಸ್ಕ್ಯಾನರ್‌ಗಳು ದೊರಕಿದ್ದು, ಸಾಮಾನ್ಯವಾಗಿ ಈ ಮಷಿನ್‌ ಖರೀದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಅನುಮತಿ ಬೇಕಾಗುತ್ತೆ. ಹೀಗಾಗೆ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗಿರೊ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply