ಐಫೆಲ್‌ ಟವರ್‌ ಮೇಲೆ ಇಡೀ ರಾತ್ರಿ ಕಳೆದ ಅಮೆರಿಕ ಪ್ರವಾಸಿಗರು! ಆಗಿದ್ದೇನು?

masthmagaa.com:

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್‌ ಟವರ್‌ನ ಮೇಲೆ ಇಬ್ಬರು ಅಮೆರಿಕ ಪ್ರವಾಸಿಗರು ಮದ್ಯಪಾನ ಮಾಡಿ ಮಲಗಿದ್ದ ಘಟನೆ ಈಗ ಬೆಳಕಿಗೆ ಬಂದಿದೆ. ಐಫೆಲ್‌ ಟವರ್‌ ನೋಡಲು ಬಂದಿದ್ದ ಈ ಪ್ರವಾಸಿಗರು ಭದ್ರತಾ ಸಿಬ್ಬಂದಿಗಳ ಕಣ್ತಪಟ್ಟಿಸಿ ಐಫೆಲ್ ಟವರ್‌ನ ನಿರ್ಬಂಧಿತ ಎರಡನೇ ಹಾಗೂ ಮೂರನೇ ಟವರ್‌ ಏರಿದ್ದಾರೆ. ಕುಡಿದ ಅಮಲಿನಲ್ಲಿದ್ದ ಈ ಇಬ್ಬರೂ ಇಡೀ ರಾತ್ರಿ ಟವರ್‌ನಲ್ಲಿಯೇ ಕಳೆದಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಐಫೆಲ್ ಟವರ್ ಬಾಗಿಲು ತೆರೆಯುವ ಮುಂಚಿತವಾಗಿಯೇ ಇಬ್ಬರು ಟವರ್ ಮೇಲೆ ಓಡಾಡುತ್ತಿರುವುದು ಕಂಡುಬಂದಿದ್ದು, ಅಪಾಯಕಾರಿ ಎತ್ತರದಿಂದ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ವಿಶೇಷ ತಂಡವನ್ನು ಕಳಿಸಿ ಕೆಳಗಿಳಿಸಲಾಗಿದೆ. ಬಳಿಕ ಇಬ್ಬರನ್ನೂ ಪ್ಯಾರಿಸ್‌ ಪೊಲೀಸ್‌ ಠಾಣೆಗೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಕ್ರಮಿನಲ್‌ ದೂರು ದಾಖಲಿಸಲಾಗುವುದು ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply