ಹೆಜ್ಜೇನು ದಾಳಿಗೆ ಬಲಿಯಾದ 2 ಕೋಟಿ ರೂಪಾಯಿ ಬೆಲೆ ಬಾಳುವ ಕುದುರೆಗಳು!

masthmagaa.com:

ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿರೋ ಪ್ರಸಿದ್ಧ ಕುದುರೆ ಫಾರಂನಲ್ಲಿ ದುರಂತವೊಂದು ಸಂಭವಿಸಿದೆ. 2 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳೊ ವಿದೇಶಿ ತಳಿಯ 2 ಗಂಡು ಕುದುರೆಗಳು ಮೃತಪಟ್ಟಿವೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ಅಮೆರಿಕ ಮೂಲದ ʻಏರ್ ಸಪೋರ್ಟ್ 15ʼ ಹಾಗೂ ಐರ್ಲೆಂಡ್ ಮೂಲದ ʻಸನಸ್ ಪರ್ ಅಕ್ಷಮ್ 10ʼ ಅನ್ನೊ ಹೆಸರಿನ ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿವೆ. ಈ ಕುದುರೆಗಳು ತಮ್ಮ ದೇಶಗಳಲ್ಲಿ ಐದು ವರ್ಷಗಳ ಕಾಲ ರೇಸ್‌ನಲ್ಲಿ ತೋರಿದ ಸಾಧನೆಯನ್ನ ನೋಡಿ ತಲಾ ಒಂದು ಕೋಟಿಗೂ ಅಧಿಕ ಬೆಲೆಗೆ ತರಲಾಗಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply