ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಟೆನಿಸ್‌ ತಾರೆ ನವೊಮಿ ಒಸಾಕ!

masthmagaa.com:

ಜಪಾನ್‌ನ ಟೆನಿಸ್‌ ತಾರೆ ನವೊಮಿ ಒಸಾಕ 2023ರ ಆಸ್ಟ್ರೇಲಿಯನ್‌ ಓಪನ್‌ನಿಂದ ಹಿಂದೆ ಸರಿದಿದ್ದಾರೆ ಅಂತ ಟೂರ್ನಿ ಆಯೋಜಕರು ತಿಳಿಸಿದ್ದಾರೆ. ಒಸಾಕ ಟೂರ್ನಿಯಿಂದ ಹಿಂದೆ ಸರಿಯೋಕೆ ಕಾರಣವನ್ನ ನೀಡಿಲ್ಲ. ಹೀಗಾಗಿ ಒಸಾಕ ಅವ್ರ ಬದಲಿಗೆ ಯುಕ್ರೇನ್‌ನ ಡಯಾನ್‌ ಯಾಸ್ಟ್ರೆಮ್ಸ್ಕಾಅವ್ರಿಗೆ ಅವಕಾಶ ನೀಡಲಾಗಿದೆ ಅಂತ ಆಸ್ಟ್ರೇಲಿಯನ್‌ ಓಪನ್‌ ಸಂಘಟಕರು ತಿಳಿಸಿದ್ದಾರೆ. ಅಂದ್ಹಾಗೆ ಒಸಾಕ ಎರಡು ಬಾರಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿದ್ರು. ಇನ್ನು ಈ ವರ್ಷದ ಟೂರ್ನಿ ಜನವರಿ 16ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.

-masthmagaa.com

Contact Us for Advertisement

Leave a Reply