ಆಹಾರ, ಪಾನಿಯಾಗಳ ಹಬ್‌ ಆಗ್ತಿರೋ UAE: ಏನಿದು ದುಬೈ ಮ್ಯಾಜಿಕ್

masthmagaa.com:

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಥ್ವಾ UAEಯಲ್ಲಿ 2,000ಕ್ಕೂ ಹೆಚ್ಚು ಆಹಾರ ಹಾಗೂ ಪಾನೀಯಗಳ ಕಂಪನಿಗಳಿವೆ ಅನ್ನೋ ರಿಪೋರ್ಟ್‌ ಹೊರಬಂದಿದೆ. ಇವುಗಳಿಂದ ದೇಶದ ಉತ್ಪಾದನಾ GDPಗೆ 25% ವರಮಾನ ಬಂದಿದೆ ಎನ್ನಲಾಗ್ತಿದೆ. ಈ ವರ್ಷದ ರಿಪೋರ್ಟ್‌ನಲ್ಲಿ ಫುಡ್‌ ಸೆಕ್ಟರ್‌ 7.6 ಬಿಲಿಯನ್‌ ಡಾಲರ್‌, ಅಂದ್ರೆ ಸುಮಾರು 63 ಸಾವಿರ ಕೋಟಿ ಹಣವನ್ನ ಜೆನರೇಟ್‌ ಮಾಡಿದೆ ಅಂತ ಅಲ್ಲಿನ Food Beverage Business Group ಅಥ್ವಾ FB ಗ್ರೂಪ್‌ ವರದಿ ಮಾಡಿದೆ. ಆ ಮೂಲಕ UAEನಲ್ಲಿ ಫುಡ್‌ ಇಂಡಸ್ಟ್ರೀ ಬೂಮ್‌ ಆಗ್ತಿದ್ದು, ಸೌದಿ ಅರೇಬಿಯಾದಂತೆ ಇಲ್ಲೂ ತೈಲವನ್ನ ಬಿಟ್ಟು ಬೇರೆ ವ್ಯವಹಾರಗಳ ಕಡೆ ಅಲ್ಲಿನ ಆಢಳಿತ ಗಮನ ಹರಿಸಿರೋದು ಗೊತ್ತಾಗ್ತಿದೆ. ಆ ಮೂಲಕ UAE ಕೂಡ ತನ್ನ ಆರ್ಥಿಕತೆಯನ್ನ ಡೈವರಸಿಫೈ ಮಾಡೋ ನಿಟ್ಟಿನಲ್ಲಿ ಕೆಲಸ ಮಾಡ್ತಿರೋದು ಗೊತ್ತಾಗ್ತಿದೆ.

-masthmagaa.com

Contact Us for Advertisement

Leave a Reply