ಕನ್ಹಯ್ಯ ಕೊಲೆ: ಹಂತಕರಿಂದ ಪಾಕ್‌ ಮೂಲದ 10 ಸಿಮ್‌ ಕಾರ್ಡ್‌ಗಳ ವಶ!

masthmagaa.com:

ರಾಜಸ್ಥಾನ ಟೈಲರ್‌ ಕನ್ಹಯ್ಯಲಾಲ್‌ ಹಂತಕರು ಪಾಕಿಸ್ತಾನದ ಜೊತೆ ಲಿಂಕ್‌ ಹೊಂದಿದ್ರು ಅನ್ನೋದು ಬೆಳಕಿಗೆ ಬರ್ತಿದ್ದಂತೆ ಈಗ ಅವರ ಬಳಿಯಿದ್ದ ಪಾಕ್‌ ಮೂಲದ 10 ಸಿಮ್‌ ಕಾರ್ಡ್‌ಗಳನ್ನ‌ ವಶಕ್ಕೆ ಪಡೆಯಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಸಂಬಂಧ ಪ್ರತಿಕ್ರಿಯಿಸಿರೋ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸ್ತೀವಿ ಅಂತ ಹೇಳಿದ್ದು ಇಂದು ಕ್ಯಾಬಿನೆಟ್‌ ಮೀಟಿಂಗ್‌ ನಡೆಸಲಿದ್ದಾರೆ. ಇನ್ನು ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾದಳ ಫೀಲ್ಡಿಗಿಳಿದಿದ್ದು ರಕ್ತಪಿಪಾಸುಗಳ ಮೂಲವನ್ನ ಜಾಲಾಡ್ತಿದೆ. ಇನ್ನು ಕೊಲೆಯಾದ ಕನ್ಹಯ್ಯರನ್ನ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯ್ತು. ಇನ್ನು ಅಂತ್ಯ ಸಂಸ್ಕಾರದಲ್ಲಿ ಹಿಂದೂ ಪರ ಸಂಘಟನೆಗಳು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ರು. ಜೊತೆಗೆ ಈ ವಂದೇ ಮಾತರಂ ಸ್ಲೋಗನ್ ಕೂಗಿ ಆಕ್ರೋಶ ಹೊರ ಹಾಕಿದ್ರು. ಈ ಬಗ್ಗೆ ಮಾತನಾಡಿದ ಕನ್ಹಯ್ಯ ಕುಟುಂಬಸ್ಥರು ʻಹಂತಕರನ್ನ ಈಗಿಂದೀಗಲೇ ಗಲ್ಲಿಗೇರಿಸ್ಬೇಕು ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಕನ್ಹಯ್ಯ ಕತ್ತನ್ನ ಈ ರಕ್ಕಸ ಜಂತುಗಳು ಶೇ 80 ರಷ್ಟು ಕಡಿದು ಹಾಕಿದ್ರು ಅನ್ನೋ ಭೀಕರ ಸಂಗತಿ ಬಯಲಾಗಿದೆ. ಇನ್ನು ಕನ್ಹಯ್ಯ ತನಗೆ ಜೀವ ಬೆದರಿಕೆ ಇದೆ ಅಂತ ಕೆಲ ದಿನಗಳಿಂದ ಶಾಪ್‌ ಬಂದ್‌ ಮಾಡಿದ್ರು. ಆದ್ರೆ ನಿನ್ನೆಯಷ್ಟೇ ವ್ಯಾಪಾರವನ್ನ ಮತ್ತೆ ಆರಂಭಿಸೋದಾಗಿ ಶಾಪ್‌ ಓಪನ್‌ ಮಾಡಿದ್ರು. ಇದನ್ನೇ ಹೊಂಚು ಹಾಕಿ ಕುಳಿತಿದ್ದ ಉಗ್ರರು, ಶಾಪ್‌ ಓಪನ್‌ ಆದ ಕೆಲವೇ ಗಂಟೆಗಳ ಬಳಿಕ ಗ್ರಾಹಕರ ಸೋಗಿನಲ್ಲಿ ಬಂದು ಕನ್ಹಯ್ಯರ ಶಿರಚ್ಛೇದ ಮಾಡಿದ್ದಾರೆ. ಇನ್ನು ಕನ್ಹಯ್ಯ ಹತ್ಯೆಗೆ ಸಂಬಂಧ ಪಟ್ಟಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು ಇಂತಹ ಹೇಯ ಘಟನೆಯಿಂದ ನಿಜಕ್ಕೂ ಶಾಕ್‌ ಆಗಿದೆ ಅಂತ ಹೇಳಿದ್ದಾರೆ. ಅಜ್ಮೀರ್‌ ಮಸೀದಿ ಮುಖ್ಯಸ್ಥ ಅಲಿ ಖಾನ್‌ ಪ್ರತಿಕ್ರಿಯಿಸಿದ್ದು ಭಾರತದ ಮುಸ್ಲಿಂರು ಯಾವುದೇ ಕಾರಣಕ್ಕೂ ಇಂತಹ ತಾಲಿಬಾನ್‌ ಮನಸ್ಥಿತಿಯನ್ನ ಸಹಿಸೋದಿಲ್ಲಅಂತ ಹೇಳಿದ್ದಾರೆ. ಇತ್ತ ಕನ್ಹಯ್ಯ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ರಾಜ್ಯದಲ್ಲೂ ಕೂಡ ಪ್ರತಿಭಟನೆ ನಡೆದಿದ್ದು ಧಾರವಾಡ, ಬೆಂಗಳೂರು ಮಂಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳು ಘಟನೆಗೆ ವಿರೋಧ ವ್ಯಕ್ತಪಡಿಸಿವೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ್ಯಂತ ಹೈ ಅಲರ್ಟ್‌ನಲ್ಲಿ ಇರುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply