ಭಾರತದ ಈ 20 ವಿಶ್ವವಿದ್ಯಾಲಯಗಳು ನಕಲಿ: UGC

masthmagaa.com:

ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಪ್ರತಿ ವರ್ಷದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ರಿಲೀಸ್‌ ಮಾಡಿದೆ. ಈ ವರ್ಷ ಒಟ್ಟು 20 ವಿವಿಗಳು ಈ ಪಟ್ಟಿಯಲ್ಲಿವೆ. ಈ ಲಿಸ್ಟ್‌ನಲ್ಲಿರೊ ವಿವಿಗಳು ನೀಡುವ ಪದವಿಗಳು ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕೆ ಮಾನ್ಯತೆ ಹೊಂದಿರಲ್ಲ. ಈ ವಿವಿಗಳು ಯಾವುದೇ ಪದವಿಯನ್ನ ನೀಡಲು ಅಧಿಕಾರ ಹೊಂದಿಲ್ಲ ಅಂತ UGC ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ. ಈ ಲಿಸ್ಟ್‌ನಲ್ಲಿ ಕರ್ನಾಟಕದ ಗೋಕಾಕ್‌ನಲ್ಲಿರುವ ಬಡಗಾಂವಿ ಸರ್ಕಾರ ವಿಶ್ವ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಸೊಸೈಟಿ ಸೇರಿದೆ. ಉಳಿದಂತೆ ದಿಲ್ಲಿಯ 8, ಉತ್ತರ ಪ್ರದೇಶದ 4 ವಿವಿಗಳು, ಮಹಾರಾಷ್ಟ್ರ, ಪುದುಚೇರಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳದ ವಿವಿಗಳು ಸೇರಿವೆ.

-masthmagaa.com

Contact Us for Advertisement

Leave a Reply