ಉಜ್ಜಯನಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಕೇಸ್‌: ಇಬ್ಬರು ಆಟೋ ಚಾಲಕರ ಬಂಧನ

masthmagaa.com:

ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆಟೋ ರಿಕ್ಷಾ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ 5 ಜನ ಶಂಕಿತರ ವಿಚಾರಣೆ ನಡೆಸಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇನ್ನು ಅತ್ಯಾಚಾರ ಸಂತ್ರಸ್ತ ಬಾಲಕಿ ತಾನು ಉತ್ತಮ ಜೀವನ ಅರಸಿ ತನ್ನ ಮನೆಯನ್ನು ತೊರೆದು ಹೊರ ಬಂದಿದ್ದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾಳೆ. ಪ್ರಕರಣ ಸಂಬಂಧ ಬಾಲಕಿಯನ್ನು ಆಪ್ತಸಮಾಲೋಚನೆಗೆ ಒಳಪಡಿಸಿದ ವೇಳೆ ಪೋಷಕರ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಸತ್ನದಿಂದ ಉಜ್ಜಯನಿಗೆ ಬಂದಿದ್ದೆ. ಆದರೆ ಆಟೋ ಡ್ರೈವರ್‌ ಅತ್ಯಾಚಾರ ಮಾಡಿದ ಎಂದು ಬಾಲಕಿ ಹೇಳಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply