ಮಧ್ಯಪ್ರದೇಶ: ಅತ್ಯಾಚಾರ ಸಂತ್ರಸ್ತ ಬಾಲಕಿ ಮನೆ ಬಾಗಿಲಿಗೆ ಬಂದು ಬೇಡಿದ್ರು ಸಹಾಯ ಮಾಡದ ಜನ

masthmagaa.com:

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಮನೆ ಮನೆ ಬಾಗಿಲಿಗೆ ಹೋಗಿ ಬೇಡಿಕೊಂಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶ ಉಜ್ಜೈನಿಯಲ್ಲಿ ನಡೆದಿದೆ. ದೈಹಿಕ ಹಿಂಸೆ ಅನುಭವಿಸಿದ ಬಳಿಕ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದುಕೊಂಡು ಬರುತ್ತಿದ್ದು, ದಾರಿಯಲ್ಲಿ ಕಾಣುವ ಮನೆ ಮನೆಯ ಬಾಗಿಲಿಗೂ ಹೋಗಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೆ ಅಲ್ಲೆ ಇದ್ದ ವ್ಯಕ್ತಿ ಆಕೆಯನ್ನ ನೋಡಿ ಸುಮ್ಮನಾಗಿದ್ದಾರೆ. ಅದ್ರಲ್ಲೂ ಇನ್ನೊಬ್ಬ ವ್ಯಕ್ತಿ ಬಾಲಕಿಯನ್ನ ಅಲ್ಲಿಂದ ಓಡಿಸಿದ್ದಾರೆ. ಈ ಅಮಾನವೀಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇನ್ನು ಇದೇ ರೀತಿ ಸಹಾಯ ಬೇಡುತ್ತ ಬಾಲಕಿ ಆಶ್ರಮವೊಂದಕ್ಕೆ ತಲುಪಿದ್ದಾಳೆ. ಅರ್ಚಕರೊಬ್ಬರು ಬಾಲಕಿ ಮೇಲೆ ಅತ್ಯಾಚಾರ ಆಗಿರುವ ಶಂಕೆ ವ್ಯಕ್ತಪಡಿಸಿದ್ದು, ಆಕೆಯ ದೇಹವನ್ನು ಬಟ್ಟೆಯಿಂದ ಮುಚ್ಚಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಕೇಸ್‌ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕಿ ಉತ್ತರ ಪ್ರದೇಶ ಪ್ರಯಾಗ್‌ ರಾಜ್‌ನವಳು ಅಂತ ತಿಳಿದು ಬಂದಿದೆ. ಆದ್ರೆ ಘಟನೆ ನಡೆದಿರೋದು ಉಜ್ಜೈನಿಯಲ್ಲಿ ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿದೆ. ಅದ್ರೆ ಬಾಲಕಿಯ ವಿಳಾಸವನ್ನು ಕೇಳಿದಾಗ, ಅವಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗಿಲ್ಲ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply