ಯುಕ್ರೇನ್​-ರಷ್ಯಾ ಯುದ್ಧ: ‘ಹಲ್ಕ್​ ಟ್ಯಾಂಕ್​’ ಆಯ್ತು.. ಈಗ ‘ಮಸ್ತಿಫ್​’..!

masthmagaa.com:

ಯುಕ್ರೇನ್​-ರಷ್ಯಾ ಯುದ್ಧದಲ್ಲಿ ಚಿತ್ರವಿತ್ರ ರೀತಿಯು ಆಯುಧಗಳು, ಮಿಲಿಟರಿ ವಾಹನಗಳ ಬಳಕೆಯಾಗ್ತಿವೆ. ನಿನ್ನೆಯಷ್ಟೇ ರಷ್ಯಾ ತನ್ನ ‘ಹಲ್ಕ್​ ಟ್ಯಾಂಕ್​’ ಅನ್ನ ಹೊರತೆಗೆದಿದೆ ಅಂತ ವರದಿಯಾಗಿತ್ತು. ಆದ್ರೆ ಇದನ್ನ ಯುಕ್ರೇನ್​ ವಿರುದ್ಧದ ಯುದ್ಧಕ್ಕೆ ಇನ್ನೂ ಬಳಸಿಕೊಂಡಿಲ್ಲ. ಇದರ ನಡುವೆ ಬ್ರಿಟನ್ ಈಗ​​ ಯುಕ್ರೇನ್​ಗೆ ಮತ್ತಷ್ಟು ಮಿಲಿಟರಿ ಸಹಾಯ ನೀಡಲು ಮುಂದಾಗಿದೆ. ತನ್ನ​ ಬಳಿ ಇರೋ ಮಸ್ತಿಫ್ ಮಿಲಿಟರಿ ವಾಹನಗಳನ್ನ ಯುಕ್ರೇನ್​ಗೆ ಕೊಡಲು ಚಿಂತನೆ ನಡೆಸಿದೆ. ಮಸ್ತಿಫ್​ ಅನ್ನೋದು ಲಾಂಗ್​ ರೇಂಜ್ ಪಟ್ರೋಲಿಂಗ್ ವಾಹನ. ಇದರಲ್ಲಿ ಕೆಲವೊಂದು ವಾಹನಕ್ಕೆ ನಾಲ್ಕೂ ಬದಿಯಿಂದಲೂ ಸುರಕ್ಷಾ ಕವಚ ರೀತಿಯ ವ್ಯವಸ್ಥೆ ಇರುತ್ತೆ. ಇವು ತುಂಬಾ ಬಲಶಾಲಿ ಟ್ರಕ್​​ಗಳಾಗಿದ್ದು ಬ್ರಿಟನ್​​ ಸೇನೆಯಲ್ಲಿ ವಿಶೇಷ ಸ್ಥಾನ ಪಡ್ಕೊಂಡಿವೆ. ಇಂಥಾ ವಾಹನಗಳನ್ನ ಈಗ ಬ್ರಿಟನ್​ ಯುಕ್ರೇನ್​​ಗೆ ಕೊಡ್ಬೋದು ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply