ಕ್ಯಾಬಿನೆಟ್‌ನಿಂದಲೇ ಬ್ರಿಟನ್‌ ಪ್ರಧಾನಿ ಸುನಾಕ್‌ಗೆ ಸಂಕಷ್ಟ! ಅಧಿಕಾರಿಗಳು ಮಾಡಿದ್ದೇನು?

masthmagaa.com:

ನೂತನ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮತ್ತೊಂದು ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಪ್ರಧಾನಿಯಾದ ಮೇಲೆ ತಮ್ಮ ಕ್ಯಾಬಿನೆಟ್‌ಗೆ ಅಪಾಯಿಂಟ್‌ ಮಾಡಿದ ಅಧಿಕಾರಿಗಳ ವಿಚಾರದಲ್ಲಿ ಅನೇಕ ಟೀಕೆಗಳನ್ನ ಎದುರಿಸ್ತಿದಾರೆ. ಅವರು ನೇಮಕ ಮಾಡಿದ ಇಬ್ಬರು ಹಿರಿಯ ಅಧಿಕಾರಿಗಳು ಸಿಬ್ಬಂದಿ ಜೊತೆ ತುಂಬಾ ಅಗ್ರೆಸಿವ್‌ ಆಗಿ ನಡೆದುಕೊಂಡಿರೊ ಆರೋಪ ಮಾಡಲಾಗಿದೆ. ಇತ್ತೀಚಿಗಷ್ಟೇ ಸುನಾಕ್‌ರ ಆಪ್ತ ಗೇವಿನ್‌ ವಿಲಿಯಮ್ಸನ್‌ ಇದೇ ವಿಚಾರವಾಗಿ ರಾಜಿನಾಮೆ ಕೊಟ್ಟಿದ್ರು. ಇದೀಗ ಇಂತದ್ದೇ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಉಪ ಪ್ರಧಾನಿ ಹಾಗೂ ಜಸ್ಟೀಸ್‌ ಸೆಕ್ರಟರಿ ಆಗಿರೊ ಡಾಮಿನಿಕ್‌ ರಾಬ್‌ ಅವರ ವಿರುದ್ದ ಆರೋಪ ಕೇಳಿಬಂದಿದೆ. ಇವರ ಹಾರ್ಶ್‌ ಅಥ್ವಾ ಸಿಟ್ಟಿನ ನಡವಳಿಕೆಯಿಂದ ಅವರ ಅಡಿಯಲ್ಲಿ ಕೆಲಸ ಮಾಡೋಕೆ ಆಗಲ್ಲ ಅನ್ನೊ 15 ಸರ್ಕಾರಿ ಉದ್ಯೋಗಿಗಳಿಗೆ ಸಚಿವಾಲಯವನ್ನ ತೊರೆಯಲು ಹಾಗೂ ಬೇರೆ ಕೆಲಸಗಳನ್ನ ಆಫರ್‌ ಮಾಡಲಾಗಿದೆ ಅಂತ ಹೇಳಲಾಗಿದೆ. ಅಂದ್ಹಾಗೆ ಈ ರಾಬ್‌, ಮೀಟಿಂಗ್‌ ಟೈಮಲ್ಲಿ ಯಾವುದೋ ವಿಷಯಕ್ಕೆ ಸಿಟ್ಟಾಗಿ ಸಲಾಡ್‌ನಿಂದ ಟೊಮ್ಯಾಟೋವನ್ನ ಎಸೆದಿದ್ರು ಅಂತ ರಾಬ್‌ನ ವಕ್ತಾರರೊಬ್ರು ಹೇಳಿದ್ದಾರೆ. ಜೊತೆಗೆ ಇವರು ಹಾರ್ಡ್‌ವರ್ಕ್‌ ಮನುಷ್ಯ. ಅವರ ಟೀಂನಿಂದಲೂ ಅದೇ ರೀತಿ ಕೆಲಸವನ್ನ ನಿರೀಕ್ಷಿಸುತ್ತಾರೆ ಅಂತ ಕೆಲವರು ಹೇಳಿದ್ದಾರೆ. ಈಗಾಗಲೇ ವಿಲಿಯಮ್ಸನ್‌ ಅವ್ರನ್ನ ನೇಮಿಸಿ ಟೀಕೆಗಳನ್ನ ಎದುರಿಸ್ತಿರೊ ಸುನಾಕ್‌ರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ಅಲ್ದೇ ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಕ್ಯಾಬಿನೆಟ್‌ನಿಂದ ರಾಜಿನಾಮೆ ಕೊಟ್ಟಿದ್ದ ಭಾರತೀಯ ಮೂಲದ ಸುಯೆಲ್ಲ ಬ್ರೆವರ್‌ಮನ್‌ ಅವ್ರನ್ನ ಕೂಡ ನೇಮಕ ಮಾಡಿ ಸುನಾಕ್ ಟೀಕೆಗಳಿಗೆ ಗುರಿಯಾಗಿದ್ರು.‌ ಸುನಾಕ್‌ ರಾಷ್ಟ್ರದ ಹಿತಾಸಕ್ತಿಗಿಂತ ತಮ್ಮ ಪಾರ್ಟಿ ಮ್ಯಾನೇಜ್‌ಮೆಂಟ್‌ಗೆ ಆದ್ಯತೆ ನೀಡ್ತಾ ಇರೊ ಒಬ್ಬ ದುರ್ಬಲ ನಾಯಕ ಅಂತ ಲೇಬರ್‌ ಪಕ್ಷದ ಲೀಡರ್‌ ಆಂಜೆಲಾ ರಾಯ್ನರ್‌ ಹೇಳಿದ್ದಾರೆ. ಇದಕ್ಕೆ ರಿಷಿ ಅವ್ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೊಂದ್‌ ಕಡೆ ಇಂದು ನಡೆಯಲಿರುವ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕ್‌ ಎದುರು ಕಣಕ್ಕಿಳಿಯಲಿರುವ ಇಂಗ್ಲೆಂಡ್‌ ತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಗೂ ನಾನು ನಿಮಗೆ ಚೀಯರ್‌ ಮಾಡ್ತೀನಿ. ನಿಮ್ಮ ಬೆಂಬಲಕ್ಕೆ ಪೂರಾ ಇಂಗ್ಲೆಂಡ್‌ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply