ಅಕ್ರಮ ವಲಸೆಯನ್ನು ತಡೆಯೋಕೆ ತಂತ್ರ ರೂಪಿಸಿದ ಬ್ರಿಟನ್‌ ಪ್ರಧಾನಿ ಸುನಾಕ್‌!

masthmagaa.com:

ಬ್ರಿಟನ್‌ಗೆ ತಲೆನೋವಾಗಿರೋ ಅಕ್ರಮ ವಲಸೆಯನ್ನ ತಡೆಯೋಕೆ ಪ್ರಧಾನಿ ರಿಷಿ ಸುನಾಕ್‌ ಹೊಸ ಸ್ಟ್ರಾಟಜಿಯನ್ನ ರೂಪಿಸಿದ್ದಾರೆ. ಈ ನೂತನ ಸ್ಟ್ರಾಟಜಿ 5 ಹಂತವನ್ನ ಹೊಂದಿದ್ದು, ಇದ್ರಲ್ಲಿ ಬ್ರಿಟನ್‌ನ ಆಶ್ರಯ ಕೋರಿ ಸಲ್ಲಿಸಿರೋ ಅರ್ಜಿಗಳನ್ನ ಪರಿಶೀಲಿಸೋದು ಸೇರಿದೆ ಅಂತ ಸುನಾಕ್‌ ಹೇಳಿದ್ದಾರೆ. ಇಂಗ್ಲಿಷ್‌ ಚಾನೆಲ್‌ ಅನ್ನ ದಾಟಿ ಬರೋ ಚಿಕ್ಕ ಹಡಗುಗಳನ್ನ ಮಾನಿಟರ್‌ ಮಾಡೋಕೆ ನೂರಾರು ಹೆಚ್ಚುವರಿ ಸಿಬ್ಬಂದಿಗಳನ್ನ ನೇಮಿಸಲಾಗುವುದು. ಹಾಗೂ ಅಲ್ಬೇನಿಯಾದಿಂದ ಬರ್ತಿರೋ ಹೆಚ್ಚಿನ ಅಕ್ರಮ ವಲಸಿಗರನ್ನ ಹ್ಯಾಂಡಲ್‌ ಮಾಡೋಕು ವಿಶೇಷ ತಂಡವನ್ನ ರಚನೆ ಸೇರಿದಂತೆ ಕೆಲ ನೂತನ ಕ್ರಮಗಳನ್ನ ತೆಗೆದುಕೊಂಡಿರೋದಾಗಿ ಸುನಾಕ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply