ಪಾಲೆಸ್ತೈನ್‌ ಜನರಿಗೂ UK ನೆರವು: ಸುನಾಕ್ ಹೇಳಿದ್ದೇನು?

masthmagaa.com:

ಭಯೋತ್ಪಾದನೆ ವಿರುದ್ಧ ಇಸ್ರೇಲ್‌ ಬೆನ್ನಿಗೆ ನಿಂತಿರೋ UK ಪ್ರಧಾನಿ ರಿಷಿ ಸುನಾಕ್‌ ಇದೀಗ ಯುದ್ಧದ ಪರಿಣಾಮಗಳನ್ನ ಫೇಸ್‌ ಮಾಡ್ತಿರೋ ಪ್ಯಾಲೆಸ್ತೈನ್‌ ಜನರಿಗೂ ಸಹ ಮನಮಿಡಿದಿದ್ದಾರೆ. ಅಕ್ಯುಪೈಡ್‌ ಪಾಲೆಸ್ತೈನ್‌ ಟೆರಿಟರೀಸ್(OPT) ಅಂದ್ರೆ ಗಾಜಾ಼ ಹಾಗೂ ಮೇನ್‌ಲ್ಯಾಂಡ್‌ ಪ್ಯಾಲೆಸ್ತೈನ್‌ನ ನಾಗರೀಕರು ಸಹ ಹಮಾಸ್‌ ದಾಳಿಯ ವಿಕ್ಟಿಮ್ಸ್‌ ಆಗಿದ್ದಾರೆ. ಹಾಗಾಗಿ ಅವರಿಗೆ 10 ಮಿಲಿಯನ್‌ ಪೌಂಡ್ಸ್ ಅಂದ್ರೆ ಸುಮಾರು 100 ಕೋಟಿ ರೂಪಾಯಿ ಮಾನವೀಯ ನೆರವು ನೀಡುವುದಾಗಿ ಸುನಾಕ್ ಬ್ರಿಟನ್‌ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದಾರೆ. ಈ ವೇಳೆ ಅವರು ಇಸ್ರೇಲ್‌ ಹಾಗೂ ಗಾಜಾ಼ದಲ್ಲಿ ಹಮಾಸ್‌ ಮಾಡಿರೋ ಕೃತ್ಯಗಳನ್ನ pogrom ಅಂದ್ರೆ ಜಾತಿ ಅಥ್ವಾ ಧರ್ಮದ ಆಧಾರದಲ್ಲಿ ಮಾಡೋ ಸಾಮೂಹಿಕ ಕೊಲೆ ಅಂತ ಖಂಡಿಸಿದ್ದಾರೆ. ಜೊತೆಗೆ ಯುದ್ಧಪೀಡಿತ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಮಾನವೀಯ ನೆರವು ಒದಗಿಸುವತ್ತ ಬ್ರಿಟನ್‌ ಕೆಲಸ ಮಾಡ್ತಿದೆ ಅಂತ ಸುನಾಕ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply